ದಾಮಿನಿ ಗಂಗಾ ನದಿಯ ಕೆಳಹರಿವಿನಿಂದ 20 ಕಿ.ಮೀ ದೂರದಲ್ಲಿ ಮಧುಬನ್ ಆಣೆಕಟ್ಟು ಇದೆ. ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಮತ್ತು ಗುಜರಾತ್ ಸರ್ಕಾರದಿಂದ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಡ್ಯಾಮ್ ನಿಂದಾಗಿ ದುಡ್ನಿ ಜಲರಾಶಿಗಳು ಹುಟ್ಟಿಕೊಂಡಿವೆ ಎನ್ನಬಹುದು. ಇದು ಸಿಲ್ವಾಸ್ಸಾ ದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ.
ಈ ಸ್ಥಳವು, ನೀರನ್ನು ಇಷ್ಟಪಡುವವರಿಗೆ ಸೂಕ್ತ ವಾಗಿದೆ. ವಾಟರ್ ಸ್ಕೂಟರ್, ಸ್ಪೀಡ್ ಬೋಟ್, ಆಕ್ವಾ ಬೈಕ್, ಬಂಪರ್ ದೋಣಿಗಳು, ಪ್ರಯಾಣಿಕರ ದೋಣಿಗಳು, ರಾಜ್ಯ ಸರ್ಕಾರದ ಪ್ರವಾಸಿ ಕೇಂದ್ರದಿಂದ ಸುಲಭವಾಗಿ ದೊರೆಯುತ್ತಿದ್ದು ದುಡ್ನಿ ಮತ್ತು ಕೌಚ ದಲ್ಲಿರುವ ಜಲಕ್ರೀಡಾ ಕಾಂಪ್ಲೆಕ್ಸಿನಲ್ಲಿ ಪ್ರವಾಸಿಗರು ತಂಗಿ ಆನಂದಿಸಬಹುದು. ಸುತ್ತುವರೆದ ಕಾಡಿನಿಂದಾಗಿ ಈ ಜಾಗ ಇನ್ನೂ ಹೆಚ್ಚು ಸುಂದರವಾಗಿ ಕಾಣುತ್ತದೆ.
ಡ್ಯಾಮ್ ನ ಹತ್ತಿರದ ಜಾಗದಲ್ಲಿ ಇರುವ ಟೆಂಟ್ಗಳಲ್ಲಿ ವಾಸಮಾಡಬಹುದು ಮತ್ತು ಇಲ್ಲಿ ಕ್ಯಾಂಪಿಂಗ್ ಅಡುಗೆ ಕೋಣೆಗಳಲ್ಲಿ ಅಡುಗೆ ಮಾಡಿಕೊಳ್ಳಬಹುದು. ಜಲಕ್ರೀಡೆಯಲ್ಲಿ ಆನಂದಿಸಿದ ನಂತರ ತೆರೆದ ಗಾಳಿಯಲ್ಲಿ ಹಳ್ಳಿಗಾಡಿನ ಊಟದ ಶೈಲಿಯನ್ನು ಸವಿಯಬಹುದು. ಆಣೆಕಟ್ಟಿನ ಹತ್ತಿರದಲ್ಲಿ ಬೇರೆಬೇರೆ ಪಿಕ್ನಿಕ್ ಸ್ಥಳಗಳಿವೆ.