Search
  • Follow NativePlanet
Share
ಮುಖಪುಟ » ಸ್ಥಳಗಳು» ಸಿಲ್ವಾಸ್ಸಾ

ಸಿಲ್ವಾಸ್ಸಾ - ಜನಸಂದಣಿಯಿಂದ ದೂರ

25

ಸಿಲ್ವಾಸ್ಸಾ ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯ ರಾಜಧಾನಿ. ಪೋರ್ಚುಗಲ್ ರ ಆಳ್ವಿಕೆಯಲ್ಲಿ ಇದನ್ನು  'ವಿಲ್ಲಾ ದಿ ಪ್ಯಾಕೋ ಡಿ ಅರ್ಕೋಸ್' ಎಂದು ಕರೆಯಲಾಗುತ್ತಿತ್ತು. ದಟ್ಟ ಜನಸಂದಣಿಯಿಂದ ದೂರವಾಗಿರುವ ಪ್ರಕೃತಿ, ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಪೋರ್ಚುಗೀಸರ ಬೇರು ಪ್ರಬಲವಾಗಿರುವ ಸ್ಥಳ ಈ ಸಿಲ್ವಾಸ್ಸಾ.

19 ನೇ ಶತಮಾನದ ವರೆಗೆ ಸಿಲ್ವಾಸ್ಸಾ ಎಲ್ಲದರಂತೆ ಒಂದು ಗ್ರಾಮ. 1885 ರ ಫೆಬ್ರವರಿಯಲ್ಲಿ ಪೋರ್ಚುಗೀಸರು ತಮ್ಮ ಆಡಳಿತದ ಕೇಂದ್ರ ಕಚೇರಿಯನ್ನು ದರಾರ ದಿಂದ ಸಿಲ್ವಾಸ್ಸಾಕ್ಕೆ ವರ್ಗಾಯಿಸಿದರು. ಇದನ್ನು ಅವರು ನಗರವಾಗಿ ಪರಿವರ್ತಿಸಿ 'ವಿಲ್ಲಾ ದಿ ಪ್ಯಾಕೋ ಡಿ ಅರ್ಕೋಸ್' ಎಂದು ಹೆಸರಿಟ್ಟರು. ಇಂದು ಸಿಲ್ವಾಸ್ಸಾ ದಾದ್ರಾ ಮತ್ತು ನಗರ್ ಹವೇಲಿ ಪ್ರದೇಶದ ತಳಹದಿಯಾಗಿದೆ. ವನ್ಯಜೀವಿ ಮತ್ತು ಪ್ರಕೃತಿ ಪ್ರವಾಸೋದ್ಯಮ ಬೆಳೆದಂತೆ ಸಿಲ್ವಾಸ್ಸಾ ಒಂದು ಪ್ರಕೃತಿ ಉತ್ಸಾಹಿ ತಾಣದ ಕೇಂದ್ರಬಿಂದು ಆಯಿತು.

ಸಿಲ್ವಾಸ್ಸಾ ಆಕರ್ಷಣೆಗಳು :

ಸಿಲ್ವಾಸ್ಸಾದಲ್ಲಿ ನೋಡಲು ಮತ್ತು ಮಾಡಲು ಸಾಕಷ್ಟಿವೆ. ಮುಖ್ಯ ಆಕರ್ಷಣೆ ಪೋರ್ಚುಗೀಸರ ವಾಸ್ತುಶಿಲ್ಪವನ್ನು ಒಳಗೊಂಡ ರೋಮನ್ ಕ್ಯಾಥೋಲಿಕ್ ಚರ್ಚ್. ದಾದ್ರಾ ಮತ್ತು ಹವೇಲಿ ಸಾಕಷ್ಟು ಬುಡಕಟ್ಟು ಜನಾಂಗವನ್ನು ಹೊಂದಿರುವ ಪ್ರದೇಶ. ಈ ಬುಡಕಟ್ಟು ಜನರ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸಗಳನ್ನು ತಿಳಿಯಲು ಇಲ್ಲಿರುವ ಬುಡಕಟ್ಟು ಸಾಂಸ್ಕೃತಿಕ ಸಂಗ್ರಹಾಲಯಕ್ಕೆ ಭೇಟಿ ನೀಡಬಹುದು. ವನ್ಯಜೀವಿ ಉತ್ಸಾಹಿಗಳಾಗಿದ್ದಲ್ಲಿ ಸಿಲ್ವಾಸ್ಸಾದಿಂದ ಸುಮಾರು 10 ಕಿ. ಮೀ ಅಂತರದಲ್ಲಿರುವ ವಸೋನ ಲಯನ್ ಸಫಾರಿಗೆ ಭೇಟಿ ನೀಡಬಹುದು. ಇಲ್ಲಿ ಘೀರ್ ಅಭಯಾರಣ್ಯದಿಂದ ತಂದ ಸಿಂಹಗಳನ್ನು ಕಾಣಬಹುದು.

ದಾಮಿನಿ ಗಂಗಾ ನದಿಯ ದಿಕ್ಕಿನಲ್ಲಿ ಸುಮಾರು 40 ಕಿ.ಮೀ ಅಂತರದಲ್ಲಿ ಮಧುಬನ್ ಆಣೆಕಟ್ಟು ಇದೆ. ನೀರಾಟವನ್ನು ಇಷ್ಟಪಡುವವರಿಗೆ ಇದು ಸ್ವರ್ಗ. ಸಿಲ್ವಾಸ್ಸಾ ಇಂದ 5 ಕಿ.ಮೀ ದೂರದಲ್ಲಿ ದಾದ್ರಾ ಉದ್ಯಾನವನವಿದೆ. ಇದು  ಚಿತ್ರ ಸದೃಶ ಸರೋವರವನ್ನು ಒಳಗೊಂಡಿದ್ದು ಇಲ್ಲಿ ಸಾಕಷ್ಟು ಬಾಲಿವುಡ್ ಹಾಡಿನ ಚಿತ್ರೀಕರಣವಾಗಿದೆ. ಹತ್ತಿರದಲ್ಲಿರುವ ವಂಗಂಗ ಲೇಕ್ ಕೂಡ ಚಲನಚಿತ್ರ ನಿರ್ದೇಶಕರು ಮತ್ತು ಪ್ರವಾಸಿಗರಿಂದ ಹೆಸರುವಾಸಿಯಾಗಿದೆ.

ದಾಮನ್ ಗಂಗಾ ನದಿಯ ವಿಸ್ತೃತ ನೀರನ್ನು ಒಳಗೊಂಡ ಧುಡ್ನಿ ಕೂಡ ಪ್ರವಾಸಿ ಸ್ಥಳವಾಗಿದೆ. ಈ ಭವ್ಯವಾದ ಜಲಕ್ರೀಡಾ ಸಂಕೀರ್ಣ ಪಶ್ಚಿಮ ಘಟ್ಟಗಳ ತಪ್ಪಲಿನಿಂದ ಸುತ್ತುವರೆದಿದೆ. ರಾಜಧಾನಿ ಸಿಲ್ವಾಸ್ಸಾದಿಂದ 14 ಕಿ.ಮೀ ಅಂತರದಲ್ಲಿ ಅದ್ಭುತ ಸೌಂದರ್ಯವನ್ನು ಒಳಗೊಂಡಿರುವ ಲುಹಾರಿ ಎಂಬ ಎಂಬ ಸ್ಥಳವಿದ್ದು, ಶಾಂತ ಸ್ವರೂಪದ ಪ್ರಕೃತಿಯನ್ನು ಒಳಗೊಂಡ ಮಹಾನ್ ಸ್ಥಳ ಇದಾಗಿದೆ. ಸಿಲ್ವಾಸ್ಸಾದ ದಕ್ಷಿಣದಲ್ಲಿ 20 ಕಿ.ಮೀ ಅಂತರದಲ್ಲಿರುವ ಖಾನ್ವೇಲ್ ಹಸಿರು ಹುಲ್ಲುಗಾವಲು, ಕುಟೀರಗಳು, ನದಿ, ಮುಗ್ದ ಪರ್ವತಗಳನ್ನು ಹೊಂದಿದ್ದು ಬೆರಗುಗೊಳಿಸುವ ಭೂ ಸದೃಶವಾಗಿದೆ. ಸತ್ಯಮಲೀಯ ಜಿಂಕೆ ಉದ್ಯಾನವನ ಹೆಸರೇ ಹೇಳುವಂತೆ ವಿವಿಧ ರೀತಿಯ ಜಿಂಕೆಗಳು ಮತ್ತು ಇತರ ಪ್ರಾಣಿಗಳನ್ನು ಇಲ್ಲಿ ಕಾಣಬಹುದು. ಸಿಲ್ವಾಸ್ಸಾ ದಕ್ಷಿಣದಿಂದ 40 ಕಿ.ಮೀ ದೂರದಲ್ಲಿರುವ ಕೌಂಚ ಎಂಬ ಬುಡಕಟ್ಟು ಜನಾಂಗದ ಗ್ರಾಮ ಮತ್ತು ಶಿವ ದೇವಸ್ಥಾನವಾದ ಬಿಂದ್ರಾಬಿನ್ ದೇವಾಲಯಗಳಿಗೂ ಕೂಡ ಭೇಟಿ ನೀಡಬಹುದು.

ಸಿಲ್ವಾಸ್ಸಾ ಪ್ರಸಿದ್ಧವಾಗಿದೆ

ಸಿಲ್ವಾಸ್ಸಾ ಹವಾಮಾನ

ಉತ್ತಮ ಸಮಯ ಸಿಲ್ವಾಸ್ಸಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಿಲ್ವಾಸ್ಸಾ

  • ರಸ್ತೆಯ ಮೂಲಕ
    ಸಿಲ್ವಾಸ್ಸಾವು ಮುಂಬೈ-ವಡೋದರಾ(ಬರೋಡಾ)- ಡೆಲ್ಲಿ ರಾಷ್ಟ್ರೀಯ ಮಾರ್ಗದಲ್ಲಿ ಬರುತ್ತದೆ. ಮುಂಬೈ ಯಿಂದ ಸಿಲ್ವಾಸ್ಸಾ 160 ಕಿ.ಮೀ ಅಂತರ. ಮುಂಬೈ (ಬೋರಿವಲಿ), ಸೂರತ್, ಅಹ್ಮದಾಬಾದ್, ಉದಯಪುರ್, ನಾಶಿಕ್ ಮತ್ತು ಶಿರಡಿ ಮುಂತಾದ ನಗರಗಳಿಂದ ದಿನನಿತ್ಯ ಬಸ್ ಗಳು ಚಾಲನೆಯಲ್ಲಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಲ್ವಾಸ್ವಾ ದಿಂದ 17 ಕಿ.ಮೀ ಇರುವ ವಾಪಿ ಹತ್ತಿರದ ರೈಲು ನಿಲ್ದಾಣ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಹೋಗಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮುಂಬೈ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣ. ಸಿಲ್ವಾಸ್ಸಾಗೆ ರಸ್ತೆ ಮಾರ್ಗವಾಗಿ ಸುಮಾರು 3 ಘಂಟೆಯ ಪ್ರಯಾಣ. ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಸುತ್ತಾಡಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat