ಕಾಂಚ್ ಕಾಂತಿ ಕಾಳಿ ಮಂದಿರ (ಆಯುಧ ಇರುವ ದೇವತೆಗಳಾದ ಕಾಳಿ ಮತ್ತು ದುರ್ಗೆಗೆ ಅರ್ಪಿಸಲಾದ ಕಾಂಚಾ ಕಾಂತಿ ಮಂದಿರ) ಸಿಲ್ಚರ್ ನಲ್ಲಿ ಪ್ರಮುಖವಾದ ಮತ್ತು ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ದೇವಿ ಮಾತೆಗೆ ಅರ್ಪಿಸಲಾದ ಈ ದೇವಸ್ಥಾನ ನಗರ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ. ಈ ದೇವಿ ಕಾಳಿ ಮತ್ತು ದುರ್ಗೆಯ ಸಮ್ಮಿಲನ ಎಂದು ನಂಬಲಾಗಿದೆ. ಈ ದೇವಸ್ಥಾನದಲ್ಲಿ ನಾಲ್ಕು ಆಯುಧಗಳನು ಹಿಡಿದ ದೇವಿಯ ಮೂರ್ತಿಗಳಿವೆ. ಇವುಗಳನ್ನು 1806 ರಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ.
ಕಾಂಚಾ ಕಾಂತಿ ಮಂದಿರ್ ಅನ್ನು ಕಚಾರಿ ರಾಜ ಕಟ್ಟಿಸಿದನು ದುರ್ಗೆ ಆತನ ಕನಸಿನಲ್ಲಿ ಬಂದು ನಾನು ಆಯುಧಗಳನ್ನು ಹಿಡಿದಿರುವಂತೆ ನನ್ನ ಮುರ್ತಿಯನ್ನು ನಿರ್ಮಿಸು ಎಂದು ಹೇಳಿದ್ದಳು ಇದಕ್ಕಾಗಿ ಆತ ಅಂತಹ ವಿಗ್ರಹವನ್ನು ಇಲ್ಲಿ ರಚಿಸಿದ್ದನು.
ಈ ದೇವಾಲಯದ ವಾಸ್ತಿಶಿಲ್ಪ ಬಹಳ ಸರಳವಾಗಿದೆ. ಇದೊಂದು ನೋಡಲೇ ಬೇಕಾದ ದೇವಾಲಯ ಎಂಬುದು ಇಲ್ಲಿ ಭೇಟಿ ನೀಡಿರುವ ಎಲ್ಲರ ಅಭಿಪ್ರಾಯವಾಗಿದೆ. ನಗರದಿಂದ ಟಾಕ್ಸಿ ಅಥವಾ ಬಸ್ ನಲ್ಲಿ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.