ಹರ್ಷ್ ಎಂದೂ ಕರೆಯಲ್ಪಡುವ ಹರಸ್ನಾಥ್ ಹಳ್ಳಿಯು ಸಿಕರ್ ಜಿಲ್ಲೆಯಲ್ಲಿದೆ. ಈ ಹಳ್ಳಿಯಲ್ಲಿ ಪ್ರಾಚೀನ ದೇವಸ್ಥಾಗಳನ್ನು ನೋಡಬಹುದಾಗಿದೆ. ಇಲ್ಲಿರುವ ಹರಸ್ನಾಥ ದೇವಸ್ಥಾನವು 10ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಇದರ ಬಳಿಯಲ್ಲೇ ಎರಡು ಶಿವನ ದೇವಸ್ಥಾನಗಳನ್ನು ನೋಡಬಹುದಾಗಿದ್ದು, ಇದರಲ್ಲಿ ಒಂದು ದೇವಸ್ಥಾನವು 18ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ.ಇವೆಲ್ಲವುಗಳ ಜೊತೆ ಪ್ರವಾಸಿಗರು ಇಲ್ಲಿ ಕ್ರಿ.ಶ 961 ರಲ್ಲಿ ರಚಿಸಲಾದ ಶಾಸನವೊಂದನ್ನು ನೋಡಬಹುದಾಗಿದೆ. ಈ ಶಾಸನವನ್ನು, ಪ್ರಸಿದ್ಧ ಚೌಹಾಣ್ ವಂಶದ ಕುರಿತು ಮಾಹಿತಿ ನೀಡುವ ಅತಿ ವಿಶ್ವಾಸಾರ್ಹ ಮೂಲ ಎಂದು ಪರಿಗಣಿಸಲಾಗಿದೆ.