Search
  • Follow NativePlanet
Share

ಸಿಕರ್ - ಕಾಲಾನುಕ್ರಮದ ಇತಿಹಾಸ

13

ಭಾರತದಲ್ಲಿಯ ರಾಜಸ್ಥಾನ ರಾಜ್ಯದ ವಾಯವ್ಯ ಭಾಗದಲ್ಲಿ ನೆಲೆಸಿರುವ ಜನಪ್ರಿಯ ಸ್ಥಳವೆಂದರೆ ಸಿಕರ್. ಪಿಂಕ್ ಸಿಟಿ ಜೈಪುರ್ ನಂತರ ಎರಡನೆ ಹೆಚ್ಚು ಅಭಿವೃದ್ಧಿಕಂಡ ಪ್ರದೇಶ ಇದಾಗಿದ್ದು ಸಿಕರ್ ಜಿಲ್ಲಾ ಕೇಂದ್ರವಾಗಿದೆ. ಈ ಸ್ಥಳವು ತನ್ನ ಗಡಿಯನ್ನು ಝುಂಜುನು, ಚುರು, ನಗೌರ್ ಮತ್ತು ಜೈಪುರ್ ಜಿಲ್ಲೆಗಳೊಂದಿಗೆ ಹಂಚಿಕೊಂಡಿದೆ. ಐತಿಹಾಸಿಕವಾಗಿ 'ಬೀರ್ ಭಾನ್ ಕಾ ಬಾಸ್' ಎಂದು ಕರೆಯಲ್ಪಡುವ ಈ ಸ್ಥಳವು ಒಂದೊಮ್ಮೆ, ಶೇಖಾವತಿ ರಾಜರುಗಳು ಆಳುತ್ತಿದ್ದ ಠಿಕಾನಾ ಸಿಕರ್ ನ ರಾಜಧಾನಿಯಾಗಿತ್ತು.

ಒಂದು ಪ್ರವಾಸಿ ತಾಣ...

ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣವಾಗಿರುವ ಸಿಕರ್, ಲಕ್ಷ್ಮಣ್ಗಡ್ ನಿಂದಾಗಿ ಹೆಸರುವಾಸಿಯಾಗಿದೆ. ಲಕ್ಷ್ಮಣ್ಗಡ್ ನಗರವು 1862 ರಲ್ಲಿ ನಿರ್ಮಿಸಲ್ಪಟ್ಟ ಲಕ್ಷ್ಮಣ್ಗಡ್ ಕೋಟೆಯಿಂದಾಗಿ ಪ್ರಸಿದ್ಧಿ ಪಡೆದಿದೆ. ಈ ಕೋಟೆಯು ತನ್ನ ಫ್ರೆಸ್ಕೋಸ್ ಹಾಗು ಶೇಖಾವತಿ ಶೈಲಿಯ ವಾಸ್ತುಶಿಲ್ಪದಿಂದ ಜಗತ್ತಿನಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತದೆ. ಈ ನಗರವು ತನ್ನಲ್ಲಿರುವ ಸಾವಂತ್ ರಾಮ್ ಚೊಖಾನಿ ಹವೇಲಿ, ಬನ್ಸಿಧರ್ ರಾಥಿ ಹವೇಲಿ, ಸಂಗನೇರಿಯಾ ಹವೇಲಿ ಮಿರಿಜಾಮಲ್ ಕ್ಯಾಲಾ ಹವೇಲಿ, ಚಾರ್ ಚೌಕ್ ಹವೇಲಿ ಮತ್ತು ಕೇದಿಯಾ ಹವೇಲಿಗಳಿಂದಾಗಿಯೂ ಸಹ ಹೆಸರುವಾಸಿಯಾಗಿದೆ.

ಸಿಕರ್ ಗೆ ಬರುವ ಪ್ರವಾಸಿಗರು ಫತೇಹ್ಪುರ್ ಪಟ್ಟಣಕ್ಕೆ ಭೇಟಿ ನೀಡಬಹುದಾಗಿದೆ. ಮುಸ್ಲಿಮ್ ಕಯ್ಯಾಮ್ ಖಾನಿಯಾದ ನವಾಬ್ ಫತೆ ಖಾನ್ ನಿಂದ ಇದು ಸ್ಥಾಪಿಸಲ್ಪಟ್ಟಿದೆ. ಈ ಸ್ಥಳವು ಪ್ರಸಿದ್ಧ ಕೋಟೆಗಳು, ಹವೇಲಿಗಳು, ದೇವಾಲಯಗಳು, ನವಾಬಿ ಬಾವ್ರಿಗಳು, ಟ್ಯಾಂಕ್ ಗಳು, ಮಸೀದಿಗಳು ಮತ್ತು ಸ್ಮಾರಕ ಸಮಾಧಿಗಳಿಗಾಗಿ ಹೆಸರುವಾಸಿಯಾಗಿದೆ. ಇಲ್ಲಿರುವ ಖತುಶ್ಯಾಮ್ಜಿ ದೇವಸ್ಥಾನವು ಪ್ರಸಿದ್ಧವಾಗಿದ್ದು ವರ್ಷಪೂರ್ತಿ ಭಕ್ತರು ಇದಕ್ಕೆ ಭೇಟಿ ನೀಡುತ್ತಿರುತ್ತಾರೆ. ಫೆಬ್ರುವರಿ ಹಾಗು ಮಾರ್ಚ್ ತಿಂಗಳುಗಳಲ್ಲಿ ಖತುಶ್ಯಾಮ್ಜಿ ಉತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ. ಉತ್ಸವವು ಈ ಪ್ರದೇಶದ ಸ್ಥಳಿಯ ಸಂಪ್ರದಾಯ ಮತ್ತು ಕಲೆಗಳನ್ನು ಅನಾವರಣಗೊಳಿಸುತ್ತದೆ. ಸಮಯಾವಕಾಶವಿದ್ದರೆ, ಪ್ರವಾಸಿಗರು ಸಿಕರ್ ಗೆ ಹತ್ತಿರದಲ್ಲಿರುವ ಗಾನೇಶ್ವರ್, ಜೀನ್ ಮಾತಾ, ಹರಸನಾಥ, ರಾಮ್ಗಡ್ ಮತ್ತು ಮಾಧೊ ನಿವಾಸ್ ಕೋಠಿಗು ಸಹ ಭೇಟಿ ನೀಡಬಹುದಾಗಿದೆ.

ಸಿಕರ್ ತಲುಪುವ ಬಗೆ

ಸಿಕರ್ ಜಿಲ್ಲೆಯು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕವನ್ನು ಹೊಂದಿದೆ. ಜೈಪುರ್ ಇದಕ್ಕೆ ಹತ್ತಿರದಲ್ಲಿರುವ ಏರ್ ಪೊರ್ಟ್. ಈ ಏರ್ ಪೊರ್ಟ್ ನಿಂದ ಭಾರತದ ಪ್ರಮುಖ ನಗರಗಳಾದ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಗೌಹಾಟಿ, ಹೈದರಾಬಾದ್, ಕೊಲ್ಕತ್ತಾ ಮತ್ತು ಮುಂಬೈಗಳಿಗೆ ನಿರಂತರವಾದ ಫ್ಲೈಟ್ ಗಳಿವೆ. ಸಿಕರ್ ರೈಲು ನಿಲ್ದಾಣವು ಜೈಪುರ್, ದೆಹಲಿ, ಗಂಗಾನಗರ, ಬಿಕಾನೇರ್ ಮತ್ತು ಚುರುಗಳಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ದೆಹಲಿ, ಜೈಪುರ್, ಜೋಧಪುರ್ ಮತ್ತು ಬಿಕಾನೇರ್ ಗಳಿಂದ ಸಿಕರ್ ಗೆ ತೆರಳಲು ಬಸ್ಸುಗಳು ದೊರೆಯುತ್ತವೆ.

ಈ ಪ್ರದೇಶವು ವರ್ಷದ ಬಹುಭಾಗ ಉಷ್ಣ ಹಾಗು ಅರೆಶುಷ್ಕ ವಾತಾವರಣವನ್ನು ಅನುಭವಿಸುತ್ತದೆ. ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ಸಿಕರ್ ಪ್ರಸಿದ್ಧವಾಗಿದೆ

ಸಿಕರ್ ಹವಾಮಾನ

ಉತ್ತಮ ಸಮಯ ಸಿಕರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಿಕರ್

  • ರಸ್ತೆಯ ಮೂಲಕ
    ದೆಹಲಿ, ಜೈಪುರ್, ಜೋಧಪುರ್ ಮತ್ತು ಬಿಕಾನೇರ್ ಗಳಿಂದ ಸಿಕರ್ ಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 11 ಸಿಕರ್ ಅನ್ನು ಜೈಪುರ್, ಬಿಕಾನೇರ್ ಮತ್ತು ಭಾರತದ ಇತರೆ ಭಾಗಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಸದ್ಯದಲ್ಲೆ ಈ ಹೆದ್ದರಿಯು ಚತುಷ್ಪಥವಾಗಿ ಹೊರಹೊಮ್ಮಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಕರ್ ರೈಲು ನಿಲ್ದಾಣವು ಜೈಪುರ್, ದೆಹಲಿ, ಗಂಗಾನಗರ, ಬಿಕಾನೇರ್ ಮತ್ತು ಚುರುಗಳಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ರೈಲು ನಿಲ್ದಾಣವು ಶೇಖಾವತಿ ಪ್ರದೇಶದ ಮುಖ್ಯ ರೈಲು ವಿಭಾಗವಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೈಪುರ್ ಇದಕ್ಕೆ ಹತ್ತಿರದಲ್ಲಿರುವ ಏರ್ ಪೊರ್ಟ್. ಈ ಏರ್ ಪೊರ್ಟ್ ನಿಂದ ಭಾರತದ ಪ್ರಮುಖ ನಗರಗಳಾದ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಗೌಹಾಟಿ, ಹೈದರಾಬಾದ್, ಕೊಲ್ಕತ್ತಾ ಮತ್ತು ಮುಂಬೈಗಳಿಗೆ ನಿರಂತರವಾದ ಫ್ಲೈಟ್ ಗಳಿವೆ. ಅಂತಾರಾಷ್ಟ್ರೀಯ ಪ್ರವಾಸಿಗರು ದೆಹಲಿಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ತಲುಪಬಹುದು. ಈ ಎರಡೂ ನಿಲ್ದಾಣಗಳಿಂದ ಇಲ್ಲಿಗೆ ತಲುಪಲು ಕ್ಯಾಬ್ ಅಥವಾ ಟ್ಯಾಕ್ಸಿಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat