1918ನೇ ಶತಮಾನದಲ್ಲಿ ಮನಿಯಾರ್ ನದಿಯಿಂದ ಸಖ್ಯಸಾಗರ ಕೆರೆ ಮತ್ತು ಮಾಧವ ಸಾಗರ ಕೆರೆಗಳನ್ನು ಸೃಷ್ಟಿಸಲಾಗಿದೆ. ಈ ಎರಡೂ ಕೆರೆಗಳು ಮಾಧವ ನ್ಯಾಷನಲ್ ಪಾರ್ಕ್ ಬಳಿಯೇ ಇವೆ. ಸುತ್ತಮುತ್ತಲಿನ ದಟ್ಟವಾದ ಮಾಧವ ನ್ಯಾಷನಲ್ ಪಾರ್ಕ್ ನ ಅರಣ್ಯ ಪ್ರದೇಶದ ಅನೇಕ ಜೈವಿಕ ವಿಭಿನ್ನತೆ ಹೊಂದಿರುವ ಮೃಗಪಕ್ಷಿಗಳಿಗೆ ಈ ಕೆರೆಗಳು ಆಶ್ರಯತಾಣವಾಗಿವೆ. ಈ ಕೆರೆ ಒಂದು ಬೋಟ್ ಕ್ಲಬ್ ಹೊಂದಿದ್ದು, ಅದರ ಹೆಸರು ಸೇಲಿಂಗ್ ಕ್ಲಬ್. ಇದು ಪ್ರವಾಸಿಗರಿಗೆ ಆಟವಾಡಲು ಮತ್ತು ಮೋಜ ಮಾಡಲು ಅವಕಾಶ ಕಲ್ಪಸಿಕೊಟ್ಟಿದೆ. ಛಾಯಾಚಿತ್ರಕಾರರಿಗೆ ಮತ್ತು ವನ್ಯಜೀವಿ ಪ್ರೇಮಿಗಳಿಗೆ ಈ ಕೆರೆಯೂ ಫೆವರಿಟ್ ಆಗಿದೆ. ಸೂರ್ಯಾಸ್ತವನ್ನು ದೋಣೆಯಲ್ಲಿ ಕುಳಿತು ದಟ್ಟವಾದ ಅರಣ್ಯ ಸಂಪತ್ತಿನ ನಡುವೆ ಕಾಣಲು ಹೆಚ್ಚು ಹರ್ಷದಾಯಕವಾಗಿರುತ್ತದೆ. ಮುಂಜಾನೆಹೊತ್ತು ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಮಾನಿಟರ್ ಹಲ್ಲಿ, ಹೆಬ್ಬಾವು, ಮೊಸಳೆಯನ್ನು ಕಾಣಲು ಸಾಧ್ಯ.