ಕರೇರ ಪಕ್ಷಿಧಾಮ ಪಕ್ಷಿಪ್ರೇಮಿಗಳಿಗೆ ಹಾಗು ಪಕ್ಷಿ ಛಾಯಾಚಿತ್ರಕಾರರಿಗೆ ಒಂದು ರಸದೌತಣವನ್ನು ಕೊಡುತ್ತದೆ. ಕರೇರ ಪಕ್ಷಿಧಾಮ ಒಂದು ಸಂರಕ್ಷಿತ ಉದ್ಯಾನವನವಾಗಿರುವುದರಿಂದ ವನ್ಯಜೀವಿಗಳು ಸ್ವೇಚ್ಛೆಯಿಂದ ಬದುಕುತ್ತಿವೆ. ಈ ಪಕ್ಷಿಧಾಮಕ್ಕೆ ಭೇಟಿ ಕೊಡುವುದರಿಂದ ಪಕ್ಷಿಗಳಷ್ಟೇ ಅಲ್ಲದೆ ಹಲವು ಬಗೆಯ ಕಾಡುಪ್ರಾಣಿಗಳ ವೀಕ್ಷಣೆ ನಮ್ಮ ಕಣ್ಮನ ತಣಿಸುತ್ತದೆ. ವಿನಾಶದ ಅಂಚಿನಲ್ಲಿರುವ ಅಪರೂಪದ ಪಕ್ಷಿಗಳ ಹಾಗು ವಲಸೆಬರುವ ಪಕ್ಷಿಗಳ ವಾಸಸ್ಥಾನ ಈ ಕರೇರ ಪಕ್ಷಿಧಾಮವಾಗಿದೆ.
ಸುಪ್ರಸಿದ್ಧವಾಗಿರುವ 'ಇಂಡಿಯನ್ ಬಸ್ಟರ್ಡ್' ಕೂಡ ಈ ಪಕ್ಷಿಧಾಮದ ನಿವಾಸಿಯಾಗಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಪಕ್ಷಿಪ್ರಾಣಿಗಳು ಈ ಕರೇರ ಪಕ್ಷಿಧಾಮದಲ್ಲಿ ಸಹಜವಾದ ರೀತಿಯಲ್ಲಿ ತಮ್ಮ ವಾಸಸ್ಥಾನ ಮಾಡಿಕೊಂಡಿರುವುದು ಅಚ್ಚರಿಯೇ ಸರಿ. ಸುಮಾರು 245ಕ್ಕೂ ಹೆಚ್ಚು ಪಕ್ಷಿಗಳ ಈ ಪಕ್ಷಿಧಾಮಕ್ಕೆ ಜನರು ದೇಶವಿದೇಶದ ಮೂಲೆಮೂಲೆಯಿಂದ ಬರುವುದು ಅಚ್ಚರಿಯೇನಲ್ಲ. ಇಲ್ಲಿಗೆ ಪ್ರವಾಸ ಕೈಗೊಳ್ಳಲು ಸೂಕ್ತಸಮಯವೆಂದರೆ ನವೆಂಬರ್ ನಿಂದ ಮಾರ್ಚ್ ವರೆಗೆ.