ಛತ್ರೀಸ್ ಅಥವಾ ಸ್ಮಾರಕಗಳು (ಸೆನೊಟಾಪ್) ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥಕ್ಕಾಗಿ ಕಟ್ಟಿದ ಕಟ್ಟಡಗಳು. ಇದು ಖಾಲಿ ಸಮಾಧಿಯಾಗಿದ್ದರೂ ಯುದ್ಧದಲ್ಲಿ ಮಡಿದ ಸೈನಿಕರ ಗೌರವ ಸೂಚಿಸುವುದಕ್ಕಾಗಿ ನಿರ್ಮಾಣ ಮಾಡಲಾಗಿರುತ್ತದೆ. ಸೆನೊಟಾಪ್ ಮೂಲತಃ ಗ್ರೀಕ್ ಶಬ್ದವಾಗಿದ್ದು, ಇತಿಹಾಸ ಪ್ರಾರಂಭದಿಂದಲೂ ಸತ್ತವರ ಗೌರವ ಸೂಚಿಯಾಗಿ ಈ ಸೆನೊಟಾಪ್ ಅಂದರೆ ಸ್ಮಾರಕಗಳನ್ನು ಕಟ್ಟಲಾಗುತ್ತದೆ. ಶಿವಪುರಿಯಲ್ಲಿರುವ ಛತ್ರೀಸ್ ಸಿಂಧಿಯಾ ರಾಜಮನೆತನದ ಸದಸ್ಯರಿಗಾಗಿ ಸಮರ್ಪಣೆ ಮಾಡಲಾಗಿದೆ. ಈ ಛತ್ರೀಸ್ ಇತಿಹಾಸ ಪ್ರಸಿದ್ಧ ಅಷ್ಟೇ ಅಲ್ಲದೆ ಕಲೆ ಮತ್ತು ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಇದನ್ನು ಅಮೃತಶಿಲೆಯಿಂದ ಕೆತ್ತಿಸಲ್ಪಟ್ಟಿದ್ದು, ಕೆತ್ತನೆಯು ಶುಭ್ರವಾಗಿ ದೋಷರಹಿತವಾಗಿದೆ.
ಮೊಘಲ್ ಗಾರ್ಡನ್ ಮಧ್ಯದಲ್ಲಿರುವ ಸುಂದರವಾದ ಕೊಳ ಕಣ್ಮನ ತಣಿಸುತ್ತದೆ. ಸಿಂಧಿಯಾ ರಾಜಮನೆತನದ ರಾಜವೈಭವವನ್ನು ಪ್ರತಿಬಿಂಬಿಸುತ್ತದೆ. ಛತ್ರೀಸನ್ನು ನಿರ್ದಿಷ್ಟವಾಗಿ ಮಾಧವರಾವ್ ಸಿಂಧಿಯಾ ಮತ್ತು ಹಿಂದಿನ ಮಹಾರಾಣಿ ಸಖ್ಯಾರಾಜೇ ಸಿಂಧಿಯಾಗೆ ಅರ್ಪಿಸಲಾಗಿದೆ.