ಹೊನ್ನಾದೇವಿಗೆ ಸೇರಿದ ಹೊನ್ನಾದೇವಿ ದೇವಾಲಯವು ಶಿವಗಂಗೆಯಲ್ಲಿದೆ. ಹೊನ್ನಾದೇವಿಯು ಹಿಂದುಗಳ ಪ್ರಮುಖ ದೇವರು ಲಯಕಾರಕನಾದ ಶಿವನ ಸತಿ. ಹೊನ್ನಾದೇವಿ ಸಾಮಾನ್ಯವಾಗಿ ಸ್ವರ್ಣಾಂಬ ಎಂದೆ ಜನಪ್ರಿಯವಾಗಿರುವ ದೇವಿಯಾಗಿದ್ದಾಳೆ. ಈ ದೇವಾಲಯವು 300 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.ಹೊಯ್ಸಳರ ರಾಣಿ ಶಾಂತಲೆಯು ಹೊನ್ನಾದೇವಿಯ ಪರಮಭಕ್ತಳಾಗಿದ್ದಳು. ಈ ದೇವಿಯು ಶಿವಗಂಗೆಯ ಗ್ರಾಮದೇವತೆಯು ಸಹ ಹೌದಾಗಿದ್ದು, ಪ್ರತಿ ವರ್ಷ ಏಪ್ರಿಲ್ ನಲ್ಲಿ ಇಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯನ್ನು ಏಳುದಿನಗಳ ಕಾಲ ಆಚರಿಸುತ್ತಾರೆ.ಈ ಜಾತ್ರೆಗೆ ಸುತ್ತಮುತ್ತಲ ಏಳು ಊರಿನ ನಾಗರೀಕರೆಲ್ಲ ಸೇರಿ ಜಾತ್ರೆಯ ಮೆರಗನ್ನು ಹೆಚ್ಚಿಸುತ್ತಾರೆ.