Search
  • Follow NativePlanet
Share
ಮುಖಪುಟ » ಸ್ಥಳಗಳು» ಶಿವಗಂಗೆ

ಶಿವಗಂಗೆ – ಅದ್ಭುತ ಶಿಲಾ ಪರ್ವತಗಳಿರುವ ವಿಹಾರತಾಣ.

15

ಶಿವಗಂಗೆ ಚಾರಣಕ್ಕೆ ಅತ್ಯುತ್ತಮ ತಾಣವಾಗಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಇದು ಒಂದು ದಿನದ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ.

 

ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ.

ಶಿವಗಂಗೆ ಮೂಲತಃ ಒಂದು ಸಣ್ಣ ಗುಡ್ಡ. ಈ ಗುಡ್ಡದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂದಿತು. ಹಾಗು ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು ಅದು ಈ ಸ್ಥಳದ ಸೊಬಗನ್ನು ಇಮ್ಮಡಿಗೊಳಿಸುತ್ತಿದೆ.  ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದೆಯೆಂದು, ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ  ಹೆಸರು ಬಂದಿತಂತೆ. ಈ ಗುಡ್ಡದ ಮೇಲಿರುವ ಶಿವನ ದೇವಾಲಯದಿಂದ ಶಿವಗಂಗೆ ದಕ್ಷಿಣ ಕಾಶಿ ಎಂಬ ಅಡ್ಡಹೆಸರು ಪಡೆದಿದೆ.

ಶಿವಗಂಗೆಯಲ್ಲಿ ನೋಡಬೇಕಾಗಿರುವ ಪ್ರಸಿದ್ಧ ಸ್ಥಳಗಳಲ್ಲಿ ಪ್ರಾಚೀನ ಗಂಗಾಧರೇಶ್ವರ ದೇವಾಲಯವು ಒಂದು. ಇಲ್ಲಿನ ದಂತಕತೆಗಳ ಪ್ರಕಾರ ಈ ದೇವಾಲಯದಿಂದ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯಕ್ಕೆ ರಹಸ್ಯ ಸುರಂಗ ಮಾರ್ಗ ಸಂಪರ್ಕವಿದೆಯಂತೆ. ಇದನ್ನು ಇದುವರೆಗು ಯಾರು ಪರಿಶೋಧಿಸಿಲ್ಲ. ಇದೆ ಸ್ಥಳದಲ್ಲಿ ಪಾತಾಳ ಗಂಗಾ ದೇವಾಲಯವಿದ್ದು ಇಲ್ಲಿ ಅಚ್ಚರಿ ಎಂಬಂತೆ ನೀರಿನ ಬುಗ್ಗೆ ರಭಸದಿಂದ ಹೊರಗೆ ಬರುತ್ತದೆ ಹಾಗು ಇಲ್ಲಿನ ನೀರಿನ ಮಟ್ಟ ನಿರಂತರವಾಗಿ ಬದಲಾಗುತ್ತಲೆ ಇರುತ್ತದೆ.

ಈ ಗುಡ್ಡದಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳಿದ್ದು ಸಾಹಸಿ ಮನೋಭಾವವಿರುವವರಿಗೆ ಶಿಲಾರೋಹಣದ ಅವಕಾಶವನ್ನು ಒದಗಿಸುತ್ತದೆ.

ದಾಬಸ್ ಪೇಟೆಯು  ಶಿವಗಂಗೆಗೆ ಸಮೀಪದ ಮುಖ್ಯ ಪಟ್ಟಣವಾಗಿದೆ. ಅದು ಇಲ್ಲಿಂದ 8 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಬರುವ ಯಾತ್ರಿಕರು ಬಸ್ಸಿನಲ್ಲಿ ತುಮಕೂರು ತಲುಪಿ ಅಲ್ಲಿಂದ ದಾಬಸ್ ಪೇಟೆಗೆ ಮತ್ತೊಂದು ಬಸ್ ಹಿಡಿದು ಹೋಗಬೇಕು. ದಾಬಸ್ ಪೇಟೆಯಿಂದ ಶಿವಗಂಗೆಗೆ ಖಾಸಗಿ ಬಸ್ಸುಗಳು ನಿರಂತರವಾಗಿ ಹೋಗಿ ಬರುತ್ತಿರುತ್ತವೆ.

ಶಿವಗಂಗೆ ಪ್ರಸಿದ್ಧವಾಗಿದೆ

ಶಿವಗಂಗೆ ಹವಾಮಾನ

ಉತ್ತಮ ಸಮಯ ಶಿವಗಂಗೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶಿವಗಂಗೆ

  • ರಸ್ತೆಯ ಮೂಲಕ
    ವಿವಿಧ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಬೆಂಗಳೂರಿನಿಂದ ಶಿವಗಂಗೆಗೆ ಹೊರಡುತ್ತವೆ. ಬೆಂಗಳೂರಿನಿಂದ ಕೆ ಎಸ್ ಆರ್ ಟಿ ಸಿ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳು ನಿರಂತರವಾಗಿ ಶಿವಗಂಗೆಗೆ ಹೋಗುತ್ತಿರುತ್ತವೆ. ಪ್ರವಾಸಿಗರು ಬಸ್ಸುಗಳಲ್ಲಿ ಅಥವಾ ಬಾಡಿಗೆ ಟ್ಯಾಕ್ಸಿಗಳಲ್ಲಿ ಶಿವಗಂಗೆಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇಲ್ಲಿಗೆ ಹತ್ತಿರದ ರೈಲ್ವೆ ನಿಲ್ದಾಣವು ದಾಬಸ್ ಪೇಟೆಯಲ್ಲಿದ್ದು, ಅದು ಶಿವಗಂಗೆಯಿಂದ 8 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣವು ಇಲ್ಲಿಗೆ ಸಮೀಪದ ಪ್ರಮುಖ ರೈಲು ಜಂಕ್ಷನ್ ಆಗಿದ್ದು, ಇದು ದೇಶದ ಪ್ರಮುಖ ನಗರ ಮತ್ತು ಪಟ್ಟಣಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಮತ್ತು ಬಾಡಿಗೆ ವಾಹನಗಳಲ್ಲಿ ಶಿವಗಂಗೆಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶಿವಗಂಗೆಗೆ ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ,ಅದು ಇಲ್ಲಿಂದ 60 ಕಿ.ಮೀ ದೂರದಲ್ಲಿದೆ. ಇದು ದೇಶಿಯ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲಕರವಾಗುವಂತಹ ವಿಮಾನ ಸಂಪರ್ಕ ಸೇವೆಯನ್ನು ಹೊಂದಿದೆ.ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈ ಜೊತೆಗೆ ಯೂರೋಪ್, ಏಶಿಯಾ,ಅಮೆರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳೊಂದಿಗೆ ಈ ನಿಲ್ದಾಣ ಉತ್ತಮ ವಿಮಾನಯಾನ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri