ಶಿವಮೊಗ್ಗದಲ್ಲಿರುವ ಪವಿತ್ರ ಹೃದಯ ಆರಾಧನಾ ಮಂದಿರ ತನ್ನ ರಚನೆಯ ಸೌಂದರ್ಯದಿಂದ ಪ್ರಸಿದ್ದಿ ಪಡೆದಿದೆ. ಮತ್ತೊಂದು ಹೆಮ್ಮೆಯ ಸಂಗತಿಯೆಂದರೆ, ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಚರ್ಚ್ ಎಂಬ ಖ್ಯಾತಿಗೂ ಪಾತ್ರವಾಗಿದೆ.
ಆರಾಧನಾ ಮಂದಿರದ 18000 ಸ್ಕೇ. ಅಡಿಯ ದೊಡ್ಡ ಹಾಲ್ ನ ನೋಟ ಮರೆಯಲಾಗದಂಥದ್ದು. ಆರಾಧನಾ ಮಂದಿರದ ಸಿಂಹಾಸನ ಅತ್ಯಪರೂಪದ ರೋಮನ್ ಗ್ರಾಫಿಕ್ ರಚನೆಯ ಶೈಲಿಯಿಂದ ಮನಸೂರೆಗೊಳ್ಳುತ್ತದೆ ಮತ್ತು ಯೇಸುದೇವರ ಬೃಹತ್ ಮೂರ್ತಿಯೂ ಹೃನ್ಮನ ಸೆಳೆಯುತ್ತದೆ. ಮುಖ್ಯ ಚರ್ಚಿನ ಸಭಾಗೃಹದಲ್ಲಿ ಸುಮಾರು 5000 ಜನ ಆರಾಮವಾಗಿ ಕೂರಬಹುದು.
ಮಂಗಳೂರು ವಿಮಾನ ನಿಲ್ದಾಣ ಶಿವಮೊಗ್ಗಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಶಿವಮೊಗ್ಗದಲ್ಲಿರುವ ರೈಲ್ವೇ ನಿಲ್ದಾಣ ಬೆಂಗಳೂರನ್ನೂ ಸೇರಿದಂತೆ ಕರ್ನಾಟಕದ ಬಹುತೇಕ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಶಿವಮೊಗ್ಗವನ್ನು ತಲುಪಿ ಕ್ಯಾಬ್, ಆಟೋರಿಕ್ಷಾ ಅಥವಾ ಸ್ಥಳೀಯ ಬಸ್ ಗಳನ್ನು ಹಿಡಿದು ಬಿ.ಎಚ್. ರೋಡ್ ತಲುಪಿದರೆ ಅಲ್ಲಿಂದ ಕಣ್ಣಳತೆಯ ದೂರದಲ್ಲಿದೆ ಪವಿತ್ರ ಹೃದಯ ಆರಾಧನಾಮಂದಿರ.