ಮನೊರ್ವಿಲ್ಲೆ ಮಹಲ್ ಶಿಮ್ಲಾದಲ್ಲಿರುವ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಹಿಮಾಚಲ್ ಪ್ರದೇಶ್ ವಿಶ್ವ ವಿದ್ಯಾನಿಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಕಟ್ಟಡದಲ್ಲಿ ಮಹಾತ್ಮ ಗಾಂಧಿ, ಜವಹಾರ್ ಲಾಲ್ ನೆಹರು, ಸರ್ದಾರ್ ಪಟೇಲ್ ಮತ್ತು ಮೌಲಾನ ಆಜಾದ್ರವರು ಲಾರ್ಡ್ ವಾವೆಲ್ರವರ ಜೊತೆಗೆ ಭಾರತದ ಸ್ವಾತಂತ್ರ್ಯದ ಕುರಿತಾಗಿ 1945ರಲ್ಲಿ ಒಂದು ಸಭೆಯನ್ನು ನಡೆಸಿದ್ದರು. ಇಲ್ಲಿ ಮಹಾತ್ಮ ಗಾಂಧೀಯವರು ತಂಗಿದ್ದ ಕೋಣೆಯನ್ನು ಇಂದಿಗು ತುಂಬ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಮೊದಲಿಗೆ ಈ ಕಟ್ಟಡ ಭಾರತದ ಮೊದಲ ಮಹಿಳಾ ಕ್ಯಾಬಿನೆಟ್ ಸದಸ್ಯರಾದ ರಾಜಕುಮಾರಿ ಅಮೃತ್ ಕೌರ್ ರವರ ಸ್ವತ್ತಾಗಿತ್ತು. ಪ್ರಸ್ತುತ ಇದನ್ನು ಅತಿಥಿ ಗೃಹವಾಗಿ ಬಳಸಲಾಗುತ್ತಿದೆ.