ಹಿಮಾಲಯನ್ ಎವಿಯರಿ ಎಂಬುದು ಒಂದು ಸುಂದರವಾದ ಉದ್ಯಾನವನವಾಗಿದೆ. ಎವಿಯರಿ ಎಂದರೆ ಹಕ್ಕಿ ಗೂಡು ಎಂದು ಸಹ ಅರ್ಥವಾಗುತ್ತದೆ. ಇಲ್ಲಿ ಅಪರೂಪದ ಪಕ್ಷಿ ಪ್ರಭೇದಗಳನ್ನು ನಾವು ನೋಡಬಹುದು. ಈ ಎವಿಯರಿಯನ್ನು ಹಿಮಾಲಯನ್ ಬರ್ಡ್ ಪಾರ್ಕ್ ಎಂದು ಸಹ ಕರೆಯುತ್ತಾರೆ. ಶಿಮ್ಲಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 2213 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ವೈಸ್‍ರೀಗಲ್ ಲಾಡ್ಜ್ ಗೆ ಸಮೀಪದಲ್ಲಿ ನೆಲೆಸಿದೆ. ಅತಿ ಅಪರೂಪವಾದ ಹೊಂಬಣ್ಣದ ನವಿಲುಗಳು, ಹಿಮಾಲಯನ್ ಮೋನಲ್ ಮತ್ತು ಇನ್ನಿತರ ಅಳಿವಿನಂಚಿನಲ್ಲಿರುವ ಹಲವಾರು ಪಕ್ಷಿಗಳನ್ನು ಕಾಣಬಹುದು. ಈ ಸುಂದರವಾದ ಉದ್ಯಾನವನವು ಸ್ಕ್ಯಾಂಡಲ್ ಪಾಯಿಂಟ್‍ನಿಂದ 4.5ಕಿ.ಮೀ ಗಳಷ್ಟು ಕಾಲ್ನಡಿಗೆಯ ದೂರದಲ್ಲಿ ನೆಲೆಸಿದೆ. ಈ ಉದ್ಯಾನವನವು ಹಿಮಪಾತದ ಕಾರಣದಿಂದ ಚಳಿಗಾಲದಲ್ಲಿ ಮುಚ್ಚಿರುತ್ತದೆ ಹಾಗು ಬೇಸಿಗೆಯಲ್ಲಿ ಮಾತ್ರ ತೆರೆದಿರುತ್ತದೆ.