ಗೂರ್ಖಾ ಗೇಟ್ ಎಂಬುದು ಶಿಮ್ಲಾದ ಹಳೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ. ಇದು ವೈಸ್‍ರೀಗಲ್ ಲಾಡ್ಜ್ ಗೆ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಚೌರ ಮೈದಾನ್ ರಸ್ತೆಯಲ್ಲಿ ನೆಲೆಗೊಂಡಿದೆ. ಈ ಲಾಡ್ಜ್ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಮೊದಲಿಗೆ ಇದು ವೈಸ್‍ರಾಯ್‍ರವರ ನಿವಾಸವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇಂದು ಇದು " ಭಾರತೀಯ ಉನ್ನತ ಅಧ್ಯಯನ ಸಂಸ್ಥೆ"ಯ ಕಛೇರಿ ಇದೆ. ಈ ಗೇಟನ್ನು ಬ್ರಿಟೀಷ್ ಸೈನ್ಯದಲ್ಲಿದ್ದ ಗೂರ್ಖಾರು ತೋರಿದ ಅಪ್ರತಿಮ ಸಾಹಸ ಮತ್ತು ನಿಷ್ಠೆಗೆ ಗೌರವ ಸೂಚಿಸುವ ಸಲುವಾಗಿ ನಿರ್ಮಿಸಲಾಗಿದೆ. ಈ ಕಲ್ಲಿನ ಕಟ್ಟಡವು ಪ್ರವಾಸಿಗರಿಗೆ ಕುತೂಹಲಕರವಾದ ನೋಟವನ್ನು ಒದಗಿಸುತ್ತದೆ.