ಡೊರ್ಜೆ ಡ್ರಾಕ್ ಬೌದ್ಧ ಮಠವು ಕುಸುಮುತಿಯ ಸರಸ್ವತಿ ಗಾರ್ಡನ್ ಎಸ್ಟೇಟ್ನಲ್ಲಿ ನೆಲೆಗೊಂಡಿದೆ. ಇದನ್ನು ತುಬೆಟನ್ ಎವಂ ಡೊರ್ಜೆ ಡ್ರಾಕ್ ಎಂದು ಸಹ ಕರೆಯುತ್ತಾರೆ. ಈ ಮಠವು ಬೌದ್ಧರ ಪ್ರಾಚೀನ ಪಂಥವಾದ ನೈಯಿಂಗ್ಮ ಸಂಪ್ರದಾಯವನ್ನು ಅನುಸರಿಸುತ್ತದೆ. ಟಿಬೇಟಿನ ಮೇಲೆ ಚೀನಾ ಆಕ್ರಮಣ ಮಾಡಿದ ನಂತರ ಟಕ್ಲುಂಗ್ ಟ್ಸೆಟ್ರುಲ್ ರಿನ್ಪೊಚೆ ಅವರು ಇದನ್ನು 1984ರಲ್ಲಿ ನಿರ್ಮಿಸಿದರು. ಪ್ರವಾಸಿಗರು ಇಲ್ಲಿ ಯಾವುದೇ ಪ್ರವೇಶ ಶುಲ್ಕವನ್ನು ನೀಡುವಂತಿಲ್ಲ. ಆದರೆ ಉದಾರ ದಾನಿಗಳು ತಮ್ಮ ಸೇವಾರ್ಥ ದಾನವನ್ನು ಮಾಡಬಹುದು.