ಅಲ್ಸಿಸರ್ ಮತ್ತು ಮಲ್ಸಿಸರ್ ಎಂಬುವು ಶೇಖಾವತಿ ಪ್ರಾಂತ್ಯದ ಉತ್ತರದ ತುದಿ ಭಾಗದಲ್ಲಿರುವ ಎರಡು ಪಟ್ಟಣಗಳಾಗಿವೆ. ಇವು ಜುನ್ಜುನು ಜಿಲ್ಲೆಯಲ್ಲಿವೆ. ಈ ಎರಡು ಪಟ್ಟಣಗಳು 18ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲ್ಪಟ್ಟವು. ಈ ಪ್ರಾಂತ್ಯದಲ್ಲಿಯೆ ಅತ್ಯಂತ ಸುಂದರವಾದ ರಾಜಸ್ಥಾನಿ ವಾಸ್ತುಶೈಲಿಯ ಹವೇಲಿಗಳಿಗೆ, ಬಾವಿಗಳಿಗೆ ಮತ್ತು ಜಲಾಶಯಗಳಿಗೆ ಈ ಪಟ್ಟಣಗಳು ಖ್ಯಾತಿಪಡೆದಿವೆ.ಅಲ್ಸಿಸರ್ ನಗರವು ಜುನ್ಜುನು ನಗರದಿಂದ 27 ಕಿ.ಮೀ ದೂರದಲ್ಲಿದೆ. ಈ ನಗರವು ತನ್ನಲ್ಲಿರುವ ಅಲಂಕಾರಯುತವಾದ ಹವೇಲಿಗಳಿಗೆ ಖ್ಯಾತಿಪಡೆದಿದೆ. ಶ್ರೀ ಲಾಲ್ ಬಹದ್ದೂರ್ ಮಾಲ್ ಕೀ ಹವೇಲಿ, ತೇಜ್ಪಾ್ಲ್ ಜುನ್ಜುನ್ವಾದಲಾ ಕೀ ಹವೇಲಿ, ಲಾಖಾ ಕಾ ಕೀ ಹವೇಲಿ, ಮಹಾಲಿ ದತ್ತ್, ಖೇತನ್ ಹವೇಲಿ, ಠಾಕೂರ್ ಛೋಟು ಸಿಂಗ್ರಾ ಸಮಾಧಿ, ಶ್ರೀ ಲಾಲ್ ಬಹದ್ದೂರ್ ಮಾಲ್ ಬಾವಿ ಮತ್ತು ಜೀವನ್ ರಾಮ್ ಮರೋಡಿಯ ಕಾ ತಲಾಬ್ ಇಲ್ಲಿರುವ ಇನ್ನಿತರ ಪ್ರವಾಸಿ ಆಕರ್ಷಣೆಗಳಾಗಿವೆ.ಮಲ್ಸಿಸರ್ ಎಂಬುದು ಜುನ್ಜುನು ನಗರದಿಂದ 32 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಪ್ರೇಮ್ ಗಿರಿ ಜೀ ಕಾ ಮಠ(ಒಂದು ಪವಿತ್ರ ಸ್ಥಳ), ಬನಾರಸಿ ದಾಸ್ ಬಂಕ ಹವೇಲಿ, ಸೇರ್ ಮಾಲ್ ಸರವ್ಗಿ ಹವೇಲಿ, ಬಂಕರ ಬಾವಿ, ಜೋಕಿ ರಾಮರ ಬಾವಿ ಮತ್ತು ಸರವ್ಗಿಯವರ ಬಾವಿಗಳು ಇಲ್ಲಿ ಪ್ರವಾಸಿಗರು ನೋಡಲೆ ಬೇಕಾಗಿರುವ ಪ್ರಸಿದ್ಧ ಸ್ಥಳಗಳ ಪಟ್ಟಿಯಲ್ಲಿ ಸೇರಿವೆ.