ಸೇನಾಪತಿಯಲ್ಲಿನ ಜನಗಳ ಬದುಕಿನ ನೋಟಗಳನ್ನು ಕಾಣಬೇಕೆಂದಿದ್ದಲ್ಲಿ ಮರಾಂ ಖುಲ್ಲೇನ್ ಹಳ್ಳಿಗೆ ಭೇಟಿ ನೀಡಬೇಕು. ಇದು ಇಲ್ಲಿನ ಪುರಾತನವಾದ ಮತ್ತು ಅತಿದೊಡ್ಡ ಜನ ವಸತಿ ಪ್ರದೇಶ. ಇದು ಸೇನಾಪತಿ ಪಟ್ಟಣದಿಂದ 18 ಕಿಮೀ ದೂರದಲ್ಲಿದೆ. ಇಲ್ಲಿಗೆ ರಸ್ತೆ ಸೌಲಭ್ಯವಿದೆ. ಪುರಾತತ್ವಶಾಸ್ತ್ರಜ್ಞರು ದೇಶದ ವಿವಿಧ ಮೂಲೆಗಳಿಂದ ಮಣಿಪುರದ ಇತಿಹಾಸದ ಅಧ್ಯಯನಕ್ಕೆ ಇಲ್ಲಿಗೆ ಬರುತ್ತಾರೆ.
ಇಲ್ಲಿನ ಜನ ತಮ್ಮ ಪೂರ್ವಜರಿಂದ ಬಂದ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಂಡಿದ್ದಾರೆ. ಇಲ್ಲಿ ನೀವು ಹಲವು ಪುರಾಣ ಕತೆಗಳನ್ನು ಕೇಳಬಹುದು. ಇವು ನಿಮ್ಮನ್ನು ಗತಕಾಲಕ್ಕೆ ಕರೆದುಕೊಂಡು ಹೋಗುತ್ತವೆ. ಈ ಹಳ್ಳಿಗೆ ಒಬ್ಬ ಮುಖಂಡನಿದ್ದು ಅವನು ಬಹಳ ಹಿಂದೆ ರಾಜನಿಂದ ಸನ್ಮಾನಿಸಲ್ಪಟ್ಟ ವಂಶದವನು ಅವನು ಈ ಹಳ್ಳಿಯನ್ನು ನೋಡಿಕೊಳ್ಳುತ್ತಾನೆ.