Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಆಕರ್ಷಣೆಗಳು » ಖಂಡರ್ ಕೋಟೆ

ಖಂಡರ್ ಕೋಟೆ, ಸವಾಯಿ ಮಾಧೋಪುರ್

2

ಸವಾಯಿ ಮಾಧೊಪುರದ ನೋಡಲೆ ಬೇಕಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಂಡರ್ ಕೋಟೆಯು ಸವಾಯಿ ಮಾಧೊಪುರದ ಖಂಡರ್ ತೆಹ್ಸಿಲ್ ನಲ್ಲಿ ನೆಲೆಗೊಂಡಿದೆ. ಈ ಪುರಾತನ ಕೋಟೆಯು ನಗರದ ಮುಖ್ಯಭಾಗದಿಂದ ಸುಮಾರು 40 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಕೋಟೆಯು ಪ್ರಸಿದ್ಧ ವನ್ಯಧಾಮವಾದ ರಣಥಂಬೊರ್ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿದೆ. ಲಂಬವಾಗಿ ನಿಂತಿರುವ ಬೆಟ್ಟದ ತುದಿಯ ಮೇಲೆ ನೆಲೆಗೊಂಡಿರುವ, ಈ ಕೋಟೆಗೆ ಶತ್ರುಗಳು ನುಗ್ಗುವುದು ದುಸ್ಸಾಧ್ಯವೆನ್ನುವಷ್ಟರ ಮಟ್ಟಿಗೆ ಇದು ಸುರಕ್ಷಿತವಾದ ಸ್ಥಳದಲ್ಲಿ ತಲೆ ಎತ್ತಿದೆ . ಈ ಖಂಡರ್ ಕೋಟೆಯನ್ನು ಆಳಿದ ರಾಜನೊಬ್ಬನು ತಾನು ಭಾಗವಹಿಸಿದ ಪ್ರತಿಯೊಂದು ಯುದ್ಧದಲ್ಲಿ ಗೆಲುವು ಸಾಧಿಸಿದ ದಾಖಲೆಯನ್ನು ಹೊಂದಿದ್ದನು ಎಂದರೆ, ಈ ಕೋಟೆಯ ಅಭೇದ್ಯತನದ ಪರಿಚಯ ನಿಮಗಾಗುತ್ತದೆ. ಈ ಕೋಟೆಯು ತನ್ನ ಪ್ರವೇಶ ದ್ವಾರಗಳಲ್ಲಿ ಮೂರು ಬೃಹತ್ ಬಾಗಿಲುಗಳನ್ನು ಹೊಂದಿದೆ.

ಮೇವಾಡಿನ ಸಿಸೊಡಿಯ ಕ್ಲಾನ್ ಸಾಮ್ರಾಜ್ಯವು ಈ ಕೋಟೆಯನ್ನು ಆಳಿದ ರಾಜ ಮನೆತನಗಳಲ್ಲಿ ಒಂದಾಗಿದೆ. ನಂತರ ಇವರು ಮೊಘಲರಿಂದ ಸೋಲಿಸಲ್ಪಟ್ಟರು. ಆನಂತರ ಮೊಘಲರು ಈ ಕೋಟೆಯನ್ನು ವಶಪಡಿಸಿಕೊಂಡರು. ಕೋಟೆಯ ಆವರಣದಲ್ಲಿ ಏಳು ದೇವಾಲಯಗಳಿವೆ. ಅವುಗಳೆಂದರೆ, ಹನುಮಾನ್ ದೇವಾಲಯ, ಚತುರ್ಭುಜ ದೇವಾಲಯ, ರಾಣಿ ದೇವಾಲಯ, ಗೊವಿಂದ್ ದೇವ್ ಜೀ ದೇವಾಲಯ, ಜಗತ್ಪಾಲ್ ಜೀ ದೇವಾಲಯ ಮತ್ತು ಜಯಂತಿ ಮಾತಾ ದೇವಾಲಯಗಳು ಇಲ್ಲಿವೆ. ಇದರ ಜೊತೆಗೆ ಈ ಆವರಣದಲ್ಲಿ ಹಲವಾರು ನೀರಿನ ಆಕರಗಳಿದ್ದು, ಅವುಗಳಲ್ಲಿ ಎರಡು ಟ್ಯಾಂಕ್ ಮತ್ತು ಏಳು ಕೊಳಗಳು ಸೇರಿವೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri