Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಆಕರ್ಷಣೆಗಳು » ಚೌತ್ ಮಾತಾ ದೇವಾಲಯ

ಚೌತ್ ಮಾತಾ ದೇವಾಲಯ, ಸವಾಯಿ ಮಾಧೋಪುರ್

1

ಚೌತ್ ಮಾತಾ ದೇವಾಲಯವು ಸವಾಯಿ ಮಾಧೊಪುರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಹೆಸರೆ ಸೂಚಿಸುವಂತೆ ಈ ದೇವಾಲಯವನ್ನು ಇಲ್ಲಿನ ಪ್ರಾಂತ್ಯವನ್ನು ಆಳಿದ ರಾಜರ ಪ್ರಮುಖ ಕುಲದೇವತೆಯಾದ ಚೌತ್ ಮಾತಾ ದೇವಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ವಿವಿಧ ಸಂದರ್ಭಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ.

ನಗರದಿಂದ 35 ಕಿ.ಮೀ ದೂರದಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿರುವ ಈ ದೇವಾಲಯವು ರಾಜಸ್ಥಾನದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಾಲಯವು ಹಚ್ಚ ಹಸಿರಿನಿಂದ ಕೂಡಿದ ಸುಂದರವಾದ ಹುಲ್ಲುಗಾವಲು ಮತ್ತು ಪರಿಸರದ ನಡುವೆ ನೆಲೆಸಿದೆ. ಈ ಸ್ಮಾರಕದ ರಚನೆಯು ಬಿಳಿಯ ಅಮೃತಶಿಲೆಯಲ್ಲಾಗಿದೆ. ಗೋಡೆ ಮತ್ತು ಛಾವಣಿಗಳಲ್ಲಿ ಸೂಕ್ಷವಾಗಿ ಕೆತ್ತಲಾಗಿರುವ ಶಾಸನಗಳಿಂದ ಕೂಡಿರುವ ಈ ದೇವಾಲಯವು ಪ್ರವಾಸಿಗರಿಗೆ ಸಾಂಪ್ರದಾಯಿಕವಾದ ರಜಪೂತನ ಶೈಲಿಯ ವಾಸ್ತುಶಿಲ್ಪದ ಪರಿಚಯವನ್ನು ಮಾಡಿಸುತ್ತದೆ.

ಈ ದೇವಾಲಯಕ್ಕೆ ತಲುಪಲು ನೀವು ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಇದು ಸ್ವಲ್ಪ ಮಟ್ಟಿಗಿನ ಶ್ರಮವನ್ನುನಿಮ್ಮಿಂದ ನಿರೀಕ್ಷಿಸುತ್ತದೆ. ಈ ದೇವಾಲಯವನ್ನು ನಿರ್ಮಿಸಿದ್ದು ಮಹಾರಾಜ ಭೀಮ್ ಸಿಂಗ್. ಆತನು ಇಲ್ಲಿಗೆ ಸಮೀಪದ ಪಾಂಚಾಲ ಹಳ್ಳಿಯಿಂದ ಚೌತ್ ಮಾತಾ ವಿಗ್ರಹವನ್ನು ತಂದು ಈ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದ ಆವರಣದೊಳಗೆ ದೇವಿಯ ಜೊತೆಗೆ ಗಣಪತಿ ಮತ್ತು ಭೈರವರ ಮೂರ್ತಿಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat