Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾತ್ತಲ್ » ಹವಾಮಾನ

ಸಾತ್ತಲ್ ಹವಾಮಾನ

ಸಾತ್ತಲ್ ಗೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ, ಮಾರ್ಚ್ ಹಾಗು ಜೂನ್ ಮಧ್ಯದ ಅವಧಿ ಮತ್ತು ಸೆಪ್ಟಂಬರ್ ಹಾಗು ನವಂಬರ್ ಮಧ್ಯದ ಅವಧಿ.

ಬೇಸಿಗೆಗಾಲ

(ಏಪ್ರಿಲ್-ಜೂನ್): ಏಪ್ರಿಲ್ ನಲ್ಲಿ ಪ್ರಾರಂಭವಾಗುವ ಬೇಸಿಗೆಗಾಲವು ಜೂನ್ ವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ದಾಖಲಾಗುವ ಗರಿಷ್ಠ ಹಾಗು ಕನಿಷ್ಠ ತಾಪಮಾನಗಳೆಂದರೆ ಕ್ರಮವಾಗಿ 27°C ಮತ್ತು 10°C.

ಮಳೆಗಾಲ

(ಜುಲೈ-ಅಗಸ್ಟ್): ಜುಲೈನಲ್ಲಿ ಪ್ರಾರಂಭವಾಗುವ ಮಳೆಗಾಲವು ಅಗಸ್ಟ್ ವರೆಗೂ ಮುಂದುವರೆಯುತ್ತದೆ. ಸಾತ್ತಲ್ ಪ್ರದೇಶವು ಈ ಸಂದರ್ಭದಲ್ಲಿ ಸಾಮಾನ್ಯ ಪ್ರಮಾಣದ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

(ಡಿಸೆಂಬರ್-ಫೆಬ್ರುವರಿ): ಸಾತ್ತಲ್ ನಲ್ಲಿ ಡಿಸೆಂಬರ್ ಚಳಿಗಾಲದ ಪ್ರಾರಂಭವಾದರೆ ಫೆಬ್ರುವರಿ ಕೊನೆಯಾಗಿರುತ್ತದೆ. ಈ ಸಂದರ್ಭದಲ್ಲಿ ಈ ಪ್ರದೇಶವು ಅತಿಯಾದ ಹಿಮಪಾತವನ್ನು ಅನುಭವಿಸುತ್ತದೆ ಮತ್ತು ವಾತಾವರಣದ ತಾಪಮಾನವು 2°C ಗೂ ಕುಸಿಯುತ್ತದೆ.