ಸತಾರಾ ನಗರದಿಂದ 65 ಕಿ.ಮೀ ದೂರದಲ್ಲಿರುವ ಮಯನಿ ಪಕ್ಷಿಧಾಮವು ಯಾವುದೆ ಪ್ರಕೃತಿ ಪ್ರೇಮಿಗೆ ಸಂತೋಷವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ.
ಇದು ಭಾರತದಲ್ಲಿನ ಹಲವು ಪ್ರಸಿದ್ಧ ಪಕ್ಷಿಧಾಮಗಳಲ್ಲೊಂದಾಗಿದೆ ಮತ್ತು ವಾರ್ಷಿಕವಾಗಿ ವಲಸೆಬರುವ ಪಕ್ಷಿಗಳ ಅಸಂಖ್ಯಾತ ಜಾತಿಗಳು ಚಳಿಗಾಲದಲ್ಲಿ ಈ ಸ್ಥಳವನ್ನು ತಮ್ಮ ವಾಸಸ್ಥಾನವನ್ನಾಗಿಸಿಕೊಳ್ಳುತ್ತವೆ. ಬ್ರಹ್ಮಿನಿ ಡಕ್ಸ್, ಬ್ಲಾಕ್ ಐಬಿಸ್, ರಾಜಹಂಸಗಳು ಮತ್ತು ಬಣ್ಣದ ಕೊಕ್ಕರೆಗಳು ಇಲ್ಲಿ ಕಾಣಸಿಗುವ ಹಕ್ಕಿಗಳ ಕೆಲವು ವಿಧಗಳು.