ಸಿಲ್ಸೆರ್ ಕೆರೆಯು ರಾಜಸ್ಥಾನದ ಈಶಾನ್ಯಭಾಗದಲ್ಲಿರುವ ಅಲ್ವರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಸುಮಾರು 7 ಚ.ಕಿ.ಮೀ ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ಕೆರೆಯನ್ನು ಮಹಾರಾಜ ವಿನಯ್ ಸಿಂಗ್ 1845 ರಲ್ಲಿ ನಿರ್ಮಿಸಿದನು. ಈ ಕೆರೆಯಿಂದ ಅಲ್ವರ್ ನಗರಕ್ಕೆ ನೀರನ್ನು ಒದಗಿಸಲಾಗುತ್ತಿತ್ತು.ಇಲ್ಲೊಂದು ಸುಂದರವಾದ ಅರಮನೆಯಿದೆ. ಇದನ್ನು ಮಹಾರಾಜ ವಿನಯ್ ಸಿಂಗ್ ತನ್ನ ರಾಣಿ ಶೀಲಾ ಸಲುವಾಗಿ ನಿರ್ಮಿಸಿದ್ದನು. ಇದು ರಾಜನ ಅಧಿಕೃತ ಅರಮನೆಯಾಗಿ ಮತ್ತು ಶಿಕಾರಿ ತಂಗುದಾಣವಾಗಿ ಸಹ ಬಳಕೆಯಾಗುತ್ತಿತ್ತು. ಈ ಅರಮನೆಯನ್ನು ಪ್ರಸ್ತುತ ಒಂದು ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಈ ಹೋಟೆಲ್ ಆಧುನಿಕವೆನ್ನುವ ಎಲ್ಲಾ ಸೌಲಭ್ಯಗಳನ್ನು ತನ್ನಲ್ಲಿ ಒಳಗೊಂಡಿದೆ. ಕೆರೆಯಲ್ಲಿ ದೋಣಿ ವಿಹಾರ ಮತ್ತು ಹಾಯಿ ದೋಣಿ ನಡೆಸುವ ಸೌಲಭ್ಯವನ್ನು ಸಹ ಪಡೆಯಬಹುದು.