Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ಆಕರ್ಷಣೆಗಳು » ಸರಿಸ್ಕ ರಾಷ್ಟ್ರೀಯ ಉದ್ಯಾನವನ

ಸರಿಸ್ಕ ರಾಷ್ಟ್ರೀಯ ಉದ್ಯಾನವನ, ಸರಿಸ್ಕ

2

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕ ರಾಷ್ಟ್ರೀಯ ಉದ್ಯಾನವನವು ಸರಿಸ್ಕ ಹುಲಿ ಮೀಸಲು ಅರಣ್ಯ ಎಂದು ಸಹಾ ಕರೆಯಲ್ಪಡುತ್ತದೆ. ಇದು ದೆಹಲಿಅಲ್ವಾರ್ ರಸ್ತೆಯ ನಡುವೆ ಬರುತ್ತದೆ. ಈ ಪ್ರದೇಶವು ಮೊದಲಿಗೆ ಅಲ್ವಾರ್ ಸಂಸ್ಥಾನದ ಶಿಕಾರಿಯ ಮೀಸಲು ಅರಣ್ಯವಾಗಿ ಬಳಕೆಯಲ್ಲಿತ್ತು. ನಂತರ ಇದನ್ನು 1955 ರಲ್ಲಿ ವನ್ಯಜೀವಿ ಧಾಮವನ್ನಾಗಿ ಘೋಷಿಸಲಾಯಿತು. 1979 ರಲ್ಲಿ ಇದು ರಾಷ್ಟ್ರೀಯ ಉದ್ಯಾನವನದ ಮಾನ್ಯತೆಯನ್ನು ಪಡೆಯಿತು.ಸುಮಾರು 800 ಚ.ಕಿ.ಮೀ ವ್ಯಾಪಿಸಿರುವ ಈ ರಾಷ್ಟ್ರೀಯ ಉದ್ಯಾನವನವು ನಯನ ಮನೋಹರವಾದ ಅರಾವಳಿ ಪರ್ವತ ಶ್ರೇಣಿಗಳ ನಡುವೆ ನೆಲೆಸಿದೆ. ಇದು ತನ್ನೊಳಗೆ ವಿವಿಧ ಬಗೆಯ ಹುಲ್ಲುಗಾವಲುಗಳನ್ನು, ಒಣ ಎಲೆ ಉದುರುವ ಕಾಡುಗಳನ್ನು, ಮುಗಿಲತ್ತ ಚಾಚಿರುವ ಗಿರಿಶೃಂಗಗಳಿಂದ ಮತ್ತು ಶಿಲಾವೃತವಾದ ಭೂಭಾಗಗಳನ್ನು ಒಳಗೊಂಡಿದೆ. ಈ ಪ್ರದೇಶದ ಪ್ರಮುಖ ಭಾಗ ಧೋಕ್ ಮರಗಳಿಂದ ಆವೃತವಾಗಿದ್ದು , ವಿವಿಧ ಬಗೆಯ ವನ್ಯಜೀವಿಗಳಿಗೆ ಇದು ಆಶ್ರಯವನ್ನು ಒದಗಿಸಿದೆ. ಸರಿಸ್ಕ ರಾಷ್ಟ್ರೀಯ ಉದ್ಯಾನವನವು ಚಿರತೆ, ಸಾಂಬರ್, ಚಿತಲ್, ನೀಲ್ ಗಾಯ್, ನಾಲ್ಕು ಕೊಂಬಿನ ಜಿಂಕೆಗಳು, ಕಾಡು ಹಂದಿ, ಲಂಗೂರ್, ಕೋತಿಗಳನ್ನು ,ಕತ್ತೆ ಕಿರುಬ, ಮತ್ತು ಕಾಡು ಬೆಕ್ಕುಗಳಂತಹ ವನ್ಯ ಜೀವಿಗಳಿಗೆ ನೆಲೆಯನ್ನು ನೀಡಿದೆ. ಅಲ್ಲದೆ ಈ ರಾಷ್ಟ್ರೀಯ ಉದ್ಯಾನವನದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ನವಿಲುಗಳು, ಗೌಜುಗಗಳು, ಹೊಂಬಣ್ಣದ ಮರಕುಟುಕಗಳು ಮತ್ತು ಗಿಡುಗಗಳನ್ನು ಕಾಣಬಹುದು.ಮಧ್ಯಕಾಲೀನ ಅಂದರೆ ಸುಮಾರು 10 ರಿಂದ 11ನೆ ಶತಮಾನದಲ್ಲಿ ನಿರ್ಮಿಸಲಾಗಿರುವ ಘರ್- ರಾಜೊರ್ ನ ದೇವಾಲಯಗಳ ಅವಶೇಷಗಳನ್ನು ಈ ಉದ್ಯಾನವನದಲ್ಲಿ ನಾವು ಕಾಣಬಹುದು. ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೆಟ್ಟದ ಮೇಲೆ 17ನೇ ಶತಮಾನದ ಒಂದು ಕೋಟೆಯನ್ನು ಸಹ ನಾವು ಕಾಣಬಹುದು. ಈ ಕೋಟೆಯ ಮೇಲೆ ನಿಂತರೆ ನೋಡುಗರನ್ನು ಮಂತ್ರ ಮುಗ್ಧ ಗೊಳಿಸುವಂತಹ ರಣಹದ್ದು ಮತ್ತು ಗಿಡುಗಗಳ ಹಾರಾಡುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.ಈ ಹುಲಿ ಸಂರಕ್ಷಿತ ಅರಣ್ಯವು ಹುಲಿಯಲ್ಲದೆ ಇತರೆ ಮಾಂಸಾಹಾರಿ ಪ್ರಾಣಿಗಳಾದ ಚಿರತೆಗಳು, ಕಾಡು ನಾಯಿಗಳು, ಕತ್ತೆ ಕಿರುಬಗಳು, ನರಿಗಳು ಮತ್ತು ಇತರೆ ಪ್ರಾಣಿಗಳ ಆವಾಸ ತಾಣವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat