ಭ್ರಾತೃಹರಿ ದೇವಾಲಯವು ರಾಜಸ್ಥಾನದಲ್ಲಿರುವ ಅಲ್ವರ್ ನಿಂದ 30 ಕಿ.ಮೀ ದೂರದಲ್ಲಿ ನೆಲೆಸಿದೆ. ಅಲ್ಲದೆ ಇದು ವಿಶ್ವ ವಿಖ್ಯಾತ ಸರಿಸ್ಕ ರಾಷ್ಟ್ರೀಯ ಉದ್ಯಾನವನಕ್ಕೆ ತುಸು ಸಮೀಪದಲ್ಲಿದೆ. ಇಲ್ಲಿ ಯೋಗಿ ಭ್ರಾತೃಹರಿಗಾಗಿ ನಿರ್ಮಿಸಲಾಗಿರುವ ದೇವಾಲಯವು ದೇಶಾದಾದ್ಯಂತ ಭಾರಿ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯವು ಯೋಗಿ ಭ್ರಾತೃಹರಿಯ ಸಮಾಧಿಯ ಮೇಲೆ ನೆಲೆಗೊಂಡಿದ್ದು, ತನ್ನ ಅನುಪಮವಾದ ರಾಜಸ್ಥಾನಿ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.