Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ದಾರ್ ಸರೋವರ್ » ಆಕರ್ಷಣೆಗಳು » ಭರುಚ್

ಭರುಚ್, ಸರ್ದಾರ್ ಸರೋವರ್

1

ನರ್ಮದಾ ನದಿಯ ಉಗಮ ಸ್ಥಾನದ ಬಳಿ ಇರುವ ಹಾಗೂ ಗುಜರಾತಿನ ಅತ್ಯಂತ ಹಳೆಯ ನಗರ ಭರುಚ್ ಆಗಿದೆ. ಈ ಸ್ಥಳಕ್ಕೆ ಬಹಳವಾದ ಪೌರಾಣಿಕ ಮಹತ್ವ ಇದೆ. ಹಿಂದೂ ಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ ಇದು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ ಅದಕ್ಕೂ ಮೊದಲು ಭೃಗು ಋಷಿ ಭೇಟಿ ನೀಡಿದ್ದರು ಎಂಬ ಕಥೆಯೂ ಇದೆ. ಸ್ಕಂದ ಪುರಾಣದ ಹೊರತಾಗಿ ಭಾಗವತ ಪುರಾಣ, ಶಿವ ಪುರಾಣ, ಕುಮಾರ ಪುರಾಣ, ಮತ್ಸ್ಯ ಪುರಾಣ ಹಾಗೂ ರಾಮಾಯಣದಲ್ಲೂ ಭರುಚ ಸ್ಥಳದ ಬಗ್ಗೆ ಉಲ್ಲೇಖವಿದೆ. ಅಲ್ಲದೆ ಜೈನ ಹಾಗು ಬೌದ್ಧ ಧರ್ಮದ ಲೇಖಗಳಲ್ಲೂ ಭರುಚಿನ ಕುರಿತು ಮಾಹಿತಿಯಿದೆ. ಜೈನರು ಇದನ್ನು ತೀರ್ಥವೆಂದು ಪರಿಗಣಿಸುತ್ತಾರೆ.

ಒಂದು ಮಹತ್ವದ ವ್ಯಾಪಾರಿ ಕೇಂದ್ರ

ಒಂದನೇಯ ಶತಮಾನದಿಂದ ಹದಿನಾರನೇಯ ಶತಮಾನದವರೆಗೂ ಭರುಚ್ ಒಂದು ಪ್ರಮುಖ ಸಮುದ್ರದ ಬಂದರಾಗಿತ್ತು. ಅರಬ್ ವ್ಯಾಪಾರಿಗಳು ಗುಜರಾತಿನ ಭರುಚ್ ಮೂಲಕ ಭಾರತಕ್ಕೆ ವ್ಯಾಪಾರಕ್ಕಾಗಿ ಆಗಮಿಸುತ್ತಿದ್ದರು. ಬ್ರಿಟೀಷ್ ಹಾಗು ವಲಂದರು ಕೂಡ ಇದನ್ನು ಮುಖ್ಯ ವ್ಯಾಪಾರಿ ಕೇಂದ್ರವನ್ನಾಗಿ ಗುರುತಿಸಿದ್ದರು.

ಬೆಳೆಯುತ್ತಿರುವ ಇತರೆ ಉದ್ದಿಮೆಗಳು

ಕೈಗಾರಿಕಾ ನಗರವಾದ ಭರುಚ್ ತನ್ನಲ್ಲಿರುವ ಜವಳಿ ಉದ್ಯಮ, ರಾಸಾಯನಿಕ ಕಾರ್ಖಾನೆಗಳು, ಕಾಟನ್ ಹಾಗು ಹೈನು ಉತ್ಪನ್ನಗಳಂತಹ ಉದ್ದಿಮೆಗಳಿಗೂ ಹೆಸರುವಾಸಿಯಾಗಿದೆ. ಬೃಹತ್ತಾದ ಲಿಕ್ವಿಡ್ ಕಾರ್ಗೊ ಟರ್ಮಿನಸ್ ಭರುಚ್ ನಲ್ಲಿ ನೆಲೆಸಿದ್ದು, ಉಪ್ಪಿನ ಕಡಲೆ ಬೀಜಗಳಿಗೂ ಇದು ಪ್ರಸಿದ್ಧವಾಗಿದೆ. ಇಲ್ಲಿನ ಮಣ್ಣಿನ ಬಣ್ಣವು ಕಪ್ಪಾಗಿರುವುದರಿಂದ ಇದನ್ನು "ಕಣಂ ಪ್ರದೇಶ" ಅಥವಾ "ಬ್ಲ್ಯಾಕ್ ಸಾಯಿಲ್ ಲ್ಯಾಂಡ್" ಎಂತಲೂ ಕರೆಯುತ್ತಾರೆ.

ಭರುಚ್ ಉತ್ಸವಗಳು

ವಿವಿಧ ಸಮುದಾಯದವರು ಇಲ್ಲಿ ನೆಲೆಸಿರುವುದರಿಂದ ಎಲ್ಲ ರೀತಿಯ ಹಬ್ಬಗಳನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರಪಂಚದಲ್ಲೆ ಭರುಚ್ ಮೇಘರಾಜ ಉತ್ಸವ ಅಥವಾ ಮಳೆ ಉತ್ಸವವನ್ನು ಆಚರಿಸುವ ಏಕೈಕ ನಗರವಾಗಿದೆ. ಇದನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ನರ್ಮದಾ ನದಿ ದಂಡೆಯ ಮರಳಿನಿಂದ ಮಾಡಲಾದ ಇಂದ್ರನ 5.5 ಅಡಿಯ ಎತ್ತರದ ಮೂರ್ತಿಯನ್ನು ಈ ಸಂದರ್ಭದಲ್ಲಿ 25 ದಿನಗಳ ಕಾಲ ಪೂಜಿಸಲಾಗುತ್ತದೆ. ಕೊನೆಯ ನಾಲ್ಕು ದಿನಗಳಿದ್ದಾಗ ಜಾತ್ರೆಯೊಂದನ್ನು ಆಯೋಜಿಸಲಾಗುತ್ತದೆ. ಇಲ್ಲಿ ಆಚರಿಸಲಾಗುವ ಮತ್ತೊಂದು ಮುಖ್ಯ ಉತ್ಸವವೆಂದರೆ ಚಾಂದನಿ ಪಾಡ್ವೊ. ಇದನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun