Search
  • Follow NativePlanet
Share
ಮುಖಪುಟ » ಸ್ಥಳಗಳು » ಸಪುತಾರಾ » ಹವಾಮಾನ

ಸಪುತಾರಾ ಹವಾಮಾನ

ಸಪುತರಾದಲ್ಲಿ,  ಹವಾಮಾನ ವರ್ಷಾದ್ಯಂತ  ಆಹ್ಲಾದಕರವಾಗಿರುತ್ತದೆ . ಬೇಸಿಗೆ ಬೆಚ್ಚಗಿದ್ದು ಮತ್ತು ಚಳಿಗಾಲದಲ್ಲಿ ಹವಾಮಾನ ಹಿತಕರವಾಗಿದ್ದು, ಈ ಜಾಗಕ್ಕೆ ಪ್ರವಾಸಕ್ಕೆ ಬರಲು ಉತ್ತಮ ಸಮಯ. ಮಳೆಗಾಲದಲ್ಲಿ  ಸಾಧಾರಣ ಮಳೆ ಪಡೆಯುತ್ತದೆ ಹಾಗೂ ಈ ಸಮಯದಲ್ಲಿಯೂ ಪ್ರವಾಸಕ್ಕೆ ಈ ಸ್ಥಳಕ್ಕೆ ಬರಬಹುದು.

ಬೇಸಿಗೆಗಾಲ

ಸಪುತರಾದಲ್ಲಿ ವಾತಾವರಣವು ವರ್ಷವಿಡೀ ಒಂದೇ ರೀತಿಯಲ್ಲಿರುತ್ತಿದ್ದು ಪ್ರವಾಸಿಗರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು.  ಬೇಸಿಗೆಯಲ್ಲಿ ಮಾರ್ಚ್ ನಿಂದ ಜೂನ್ ನಡುವೆ  ಸಪುತರಾ ತಾಪಮಾನವು 28 ಡಿ.ಸೆ ನಿಂದ  38 ಡಿ. ಸಿ ತಾಪಮಾನ ದಾಖಲಾಗುತ್ತದೆ.

ಮಳೆಗಾಲ

ಸಪುತರಾದಲ್ಲಿ,  ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ವರೆಗೆ ಕಂಡುಬರುತ್ತದೆ ಮತ್ತು ಗಿರಿಧಾಮವು ಈ ಋತುವಿನಲ್ಲಿ ಸರಾಸರಿ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಚಳಿಗಾಲವು ಸಪುತರಾದಲ್ಲಿ ಅತ್ಯಂತ ಹಿತಕರವಾಗಿರುತ್ತದೆ . ತಾಪಮಾನವು 8 ಡಿ.ಸೆ ನಿಂದ  28 ಡಿ.ಸೆನಷ್ಟು ದಾಖಲಾಗುತ್ತದೆ.  ಡಿಸೆಂಬರ್ , ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಚಳಿಗಾಲವುಂಟಾಗುತ್ತದೆ.