Search
  • Follow NativePlanet
Share
ಮುಖಪುಟ » ಸ್ಥಳಗಳು» ಶಾಂತಿನಿಕೇತನ

ಶಾಂತಿನಿಕೇತನ : ಪಾರಂಪರಿಕ ತಾಣಗಳ ಗರಿ

12

ಸಾಹಿತ್ಯಕ ಹಿನ್ನೆಲೆಯಿಂದ ಬಹಳ ಶ್ರೀಮಂತವಾಗಿರುವ ಈ ಸ್ಥಳ ಕೋಲ್ಕತ್ತಾದಿಂದ 180 ಕಿ.ಮೀ ಉತ್ತರಕ್ಕೆ ಇದೆ. ಇದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿದೆ. ನೊಬೆಲ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀದ್ರನಾಠ ಟಾಗೋರ್ ಶಾಂತಿನಿಕೇತನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು ಇಲ್ಲಿ ಪೂರ್ವದ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಸಾಹಿತ್ಯದ ಮಿಲನ ನಡೆಯುತ್ತದೆ.

ನಿಕೇತನ ಎಂದರೆ ಮನೆ ಎಂದರ್ಥ ಮತ್ತು ಶಾಂತಿ ಎಂದರೆ ಸುತ್ತಲೂ ಸೌಹಾರ್ದ ಪರಿಸರವಿರುವ ಮತ್ತು ಸದಾ ಹಚ್ಚ ಹಸಿರಾಗಿರುವ ನೆಲ ಎಂದರ್ಥ. ಇಲ್ಲಿಗೆ ಇಂದಿರಾ ಗಾಂಧಿ, ಸತ್ಯಜಿತ್ ರೇ, ಗಾಯತ್ರಿ ದೇವಿ, ನೊಬೆಲ್ ಪ್ರಶತಿ ವಿಜೇತ ಅಮರ್ತ್ಯ ಸೇನ್ ಅಬ್ದುಲ್ ಕಲಾಂ ಮುಂತಾದ ಧೀಮಂತ ವ್ಯಕ್ತಿಗಳು ಭೇಟಿ ನೀಡಿದ್ದು ಇದನ್ನು ಒಂದು ಭಾರತೀಯ್ ಮತ್ತು ವಿದೇಶೀ ಪ್ರವಾಸಿಗರಲ್ಲಿ ಅತ್ಯಂತ ಪ್ರ್ತಮುಖ ಪ್ರವಾಸಿ ತಾಣವನ್ನಾಗಿಸಿದೆ. ಇಲ್ಲಿ ನಿಮಗೆ ಸಂಸ್ಕೃತಿ, ನೃತ್ಯ ಗಳ ಸಮ್ಮಿಲನವೂ ಲಭ್ಯ.

ಶಾಂತಿ ನಿಕೇತನದ ಕುರಿತು

ಇಲ್ಲಿ ವರ್ಷದ ಎಲ್ಲಾ ಕಾಲಗಳಲ್ಲೂ ಒಂದಲ್ಲ ಒಂದು ಚಟುವಟಿಕೆ ನಡೆಯುತ್ತಾ ಇರುತ್ತದೆ. ಎಪ್ರಿಲ್ ಮಧ್ಯಭಾಗದಲ್ಲಿ ರವೀದ್ರನಾಥ್ ಟಾಗೋರ್ ಅವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಆಗಸ್ಟ್ ತಿಂಗಳ 22 ಮತ್ತು 23 ರಂದು ಬ್ರೀಕ್ಷಾರೋಪಣ್ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ವರ್ಷಮಂಗಲ್ ಎಂಬ ಮಳೆಯ ಕುರಿತಾದ ಹಬ್ಬವನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ.

ಪೌಶ್ ಉತ್ಸವ ವನ್ನು ಶಾಂತಿನಿಕೇತನದಲ್ಲಿ ಬ್ರಹ್ಮ ಮಂದಿರದ ಸ್ಥಾಪನೆಯ ನೆನಪಿಗಾಗಿ ಆಚರಿಸಲಾಗುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ನೃತ್ಯ, ಸಂಗೀತ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಕರಕುಶಲ ಕಲೆಗಳ ಕುರಿತಾದ ಉತ್ಸವವನ್ನು ಆಯೋಜಿಸಲಾಗುತ್ತದೆ. ಇದರ ಹೊರತಾಗಿಯೂ ಮಾಘೋತ್ಸವ, ಜೋಯ್ದೇವ್ ಮೇಳ ಮತ್ತು ವಸಂತ ಉತ್ಸವವನ್ನೂ ಆಚರಿಸಲಾಗುತ್ತಿದ್ದು ಹೆಚ್ಚಿನ ಪ್ರವಾಸಿಗಳ ಆಕರ್ಷಣೆಯಾಗಿದೆ.

ಶಾಂತಿ ನಿಕೇತನ ಬಂಗಾಳಿ ತಿಂಡಿಗಳಿಗಾಗಿಯೂ ಬಹಳ ಪ್ರಸಿದ್ಧವಾಗಿದೆ ಹಾಗೂ ಇಲ್ಲಿನ ಮೀನಿನ ಅಡುಗೆ ಬಹಳವೇ ಪ್ರಸಿದ್ಧ. ವಿಶ್ವ ಭಾರತಿ ಕ್ಯಾಂಪಸ್ ಬಹಳ ವಿಶಾಲವಾಗಿದ್ದು ಸುಂದರವೂ ಆಗಿದೆ. ರವೀಂದ್ರನಾಥರ ತಂದೆ ಮಹರ್ಷಿ ದೇವೇಂದ್ರನಾಥರು ಇಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು.

ಇಲ್ಲಿ ಪದವಿ ಪಡೆಯುವ ಹೊತ್ತಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಸಪ್ತಪರ್ಣಿ ಮರದ ಐದು ಎಲೆಗಳನ್ನು ನೀಡಲಾಗುತ್ತದೆ. ಎಲ್ಲಾ ಕಾಲೇಜುಗಳು ಕರಕುಶಲ ವಸ್ತುಗಳು, ಪುಸ್ತಕಗಳನ್ನು ಪ್ರದರ್ಷನಕ್ಕೆ ಇಟ್ಟಿರುತ್ತಾರೆ. ಸಾಂಪ್ರದಾಯಿಕ ಬ್ರಹ್ಮಚರ್ಯ ಆಶ್ರಮವನ್ನು ಪಾಠ ಭವನದಲ್ಲಿ ಪಾಲಿಸಲಾಗುತ್ತದೆ. ಇಲ್ಲಿ ಪ್ರತಿ ಬುಧವಾರ ಪ್ರಾರ್ಥನೆಗಳು ಜರುಗುತ್ತವೆ. ಉತ್ತತಾಯನ ಆವರಣದಲ್ಲಿ ಈ ಮಹಾಕವಿ ವಾವಿಸಿದ್ದು ಅಲ್ಲೇ ಕವನಗಳನ್ನು ಬರೆದಿದ್ದರು.

ಶಾಂತಿ ನಿಕೇತನದ ಇತರೆ ಆಕರ್ಷಣೆಗಳು

ಶಾಂತಿನಿಕೇತನದ ಬಳಿ ಇನ್ನೂ ಹಲವು ಸ್ಥಳಗಳು ನೋಡಲರ್ಹವಾಗಿವೆ. ಕಂಕಾಲಿತಲ ಎಂಬ ಸತಿಪಿಥಾ ಸ್ಥಳ ಶಾಂತಿನಿಕೇತನಕ್ಕೆ ಹೊಂದಿಕೊಂಡಿದ್ದು ಇಲ್ಲಿ ಜಿಂಕೆಗಳಿವೆ ಇದು ಬುಧವಾರ ಮುಚ್ಚಿರುತ್ತದೆ. ಜೋಯ್ದೇವ್ – ಕೆಂಡುಲಿ ಎಂಬ ಸ್ಥಳವು ಗೀತ ಗೋವಿಂದ ಕವಿಯ ಜನ್ಮ ಸ್ಥಳವಾಗಿದೆ. ನಾನೋರ್ ನಲ್ಲಿ ಒಂದು ದೇವಾಲಯವಿದೆ. ಇಲ್ಲಿ ದೇವಿ ಬಸುಲಿ ಯನ್ನು ಆರಾಧಿಸಲಾಗುತ್ತದೆ. ಇದರ ಜೊತೆಗೆ ಬರ್ಕೇಶ್ವರ ಎಂಬ ಸ್ಥಳವು ಬಿಸಿನೀರಿನ ಬುಗ್ಗೆಗಳಿಗೆ ಬಹಳ ಹೆಸರುವಾಸಿಯಾಗಿದೆ. ಇವುಗಳ ಜೊತೆಗೆ ತರ್ಪೈಥ್, ಲವ್ ಪುರ್ - ಫುಲ್ಲಾರಾ, ಸೈಂಥಾ - ನಂದೇಶ್ವರಿ, ನಲ್ಹತಿ ಮತ್ತು ಮಸ್ಸಾಂಜೋರೆ ಯಲ್ಲಿ ಪವಿತ್ರ ಸತಿಪಿಥಾಗಳು ಹಾಗೂ ದೇವಾಲಯಗಳಿವೆ.

ಶಾಂತಿ ನಿಕೇತನ ತಲುಪುವುದು ಹೇಗೆ

ರಸ್ತೆ ಹಾಗೂ ರೈಲು ಮಾರ್ಗವಾಗಿ ಶಾಂತಿ ನಿಕೇತನ ಸಮರ್ಪಕವಾಗಿ ಸಂಪರ್ಕದಲ್ಲಿದೆ. ಸಮೀಪದ ವಿಮಾನ ನಿಲ್ದಾಣ ಕೋಲ್ಕತ್ತಾ ದಲ್ಲಿದೆ.

ಶಾಂತಿನಿಕೇತನ ಪ್ರಸಿದ್ಧವಾಗಿದೆ

ಶಾಂತಿನಿಕೇತನ ಹವಾಮಾನ

ಉತ್ತಮ ಸಮಯ ಶಾಂತಿನಿಕೇತನ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶಾಂತಿನಿಕೇತನ

  • ರಸ್ತೆಯ ಮೂಲಕ
    ಕೋಲ್ಕತ್ತಾದಿಂದ ಸುಮಾರು 163 ಕಿ.ಮೀ ದೂರದಲ್ಲಿ ಶಾಂತಿ ನಿಕೇತನವಿದೆ ಹಾಗೂ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಶಾಂತಿನಿಕೇತನದಿಂದ 2 ಕಿ.ಮೀ ದೂರದಲ್ಲಿರುವ ಬೋಲ್ಪುರದಲ್ಲಿ ರೈಲ್ವೆ ನಿಲ್ದಾಣವಿದೆ. ಕೋಲ್ಕತ್ತಾದಿಂದ ಬೋಲ್ಪುರವನ್ನು ರೈಲು ಮಾರ್ಗದಲ್ಲಿ ತಲುಪಲು ಎರಡರಿಂದ ಮೂರು ಗಂಟೆಗಳು ಬೇಕಾಗಿವೆ. ಸರೈಘಾಟ್ ಎಕ್ಸ್ ಪ್ರೆಸ್ ರೈಲು ಈ ಮಾರ್ಗದಲ್ಲಿ ಓಡಾಡುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಾಂತಿನಿಕೇತನಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 248 ಕಿ.ಮೀ ದೂರದಲ್ಲಿದೆ. ಕೋಲ್ಕತ್ತಾದಿಂದ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಸಮರ್ಪಕವಾದ ವಿಮಾನ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat