Search
  • Follow NativePlanet
Share

ಸಂಕೂ - ಪ್ರಕೃತಿ ವೈಭವ

8

ಸಂಕೂ ಎಂಬುದು ಜಮ್ಮು ಕಾಶ್ಮೀರದ ಒಂದು ನಗರವಾಗಿದ್ದು, ಕಾರ್ಗಿಲ್ ನಗರದಿಂದ 42 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಪ್ರಕೃತಿಯ ರಮ್ಯ ವಾತಾವರಣದ ನಡುವೆ ನೆಲೆಸಿದ್ದು, ವಿಹಾರಕ್ಕೆ ಬರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಈ ನಗರವು ಬಟ್ಟಲಿನಾಕಾರದ ಒಂದು ಕಣಿವೆಯಲ್ಲಿ ನೆಲೆಗೊಂಡಿದೆ. ಈ ಕಣಿವೆಯಲ್ಲಿ ಸುರು ಎಂಬ ಪ್ರಮುಖ ನದಿಯ ಉಪನದಿಗಳಾದ ನಕ್‍ಪೊಚು ಮತ್ತು ಕರ್ಟ್ಸೆಗಳು ಹರಿಯುತ್ತವೆ.

ಈ ಸ್ಥಳವು ಇಲ್ಲಿರುವ ಕರ್ಪೊ-ಖಾರ್ ಸಮಾಧಿಯ ಕಾರಣವಾಗಿ ಪ್ರವಾಸಿಗರ ವಲಯದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಈ ಸಮಾಧಿಯನ್ನು ಸಯದ್ ಮೀರ್ ಹಶೀಮ್‍ರವರಿಗಾಗಿ ನಿರ್ಮಿಸಲಾಗಿದೆ. ಇವರು ಒಬ್ಬ ಇಸ್ಲಾಮಿಕ್ ಸಂತ ಮತ್ತು ವಿದ್ವಾಂಸರಾಗಿದ್ದರು. ಇವರು 16ನೇ ಶತಮಾನದಲ್ಲಿ ಇಸ್ಲಾಮಿನ ಭೋದನೆಯನ್ನು ನೀಡಲು ಬೌದ್ಧ ರಾಜನಾದ ಥಿ-ನಂಗ್ಯಾಲ್‍ರವರನ್ನು ಕರೆದರಂತೆ. ಇವರಿಂದ ಪ್ರಭಾವಿತನಾದ ಥಿ-ನಂಗ್ಯಾಲ್‍ ತಾನು ಬೌದ್ಧ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದನಂತೆ. ಯಾತ್ರಾರ್ಥಿಗಳು ಕರ್ಪೊ-ಖಾರ್ ಸಮಾಧಿಗೆ ಭೇಟಿಕೊಟ್ಟು ಸಂತರಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ಸಂಕೂಗೆ ಹೋದಾಗ ಪ್ರವಾಸಿಗರು ಈ ನಗರಕ್ಕೆ ಸಮೀಪದಲ್ಲಿರುವ ಕಾಡಿನಲ್ಲಿ ಸುತ್ತಾಡಬಹುದು. ಪ್ರವಾಸಿಗರು ಇಲ್ಲಿ ದೇವದಾರು ಮತ್ತು ವಿಲ್ಲೋ ಮರಗಳ ಜೊತೆಗೆ ವಿವಿಧ ಬಗೆಯ ಮರಗಳನ್ನು ಕಾಣಬಹುದು. ಈ ಸ್ಥಳವು ವಾರಂತ್ಯವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

ಪ್ರವಾಸಿಗರು ಸಂಕೂಗೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಲೇಹ್ ವಿಮಾನ ನಿಲ್ದಾಣ ಮತ್ತು ಶ್ರೀ ನಗರ್ ವಿಮಾನ ನಿಲ್ದಾಣಗಳು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣಗಳಾಗಿವೆ. ಇವುಗಳು ಔರಂಗಬಾದ್, ಜಮ್ಮು, ದೆಹಲಿ, ಬೆಂಗಳೂರು ಮತ್ತು ಪುಣೆ ವಿಮಾನ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿವೆ. ಪ್ರವಾಸಿಗರು ಈ ವಿಮಾನ ನಿಲ್ದಾಣಗಳಿಂದ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಸಂಕೂವನ್ನು ತಲುಪಬಹುದು.

ಸಂಕೂಗೆ ರೈಲಿನಲ್ಲಿ ತಲುಪಲು ಇಚ್ಛಿಸುವ ಪ್ರವಾಸಿಗರು ಜಮ್ಮುವಿನ ತಾವಿ ರೈಲು ನಿಲ್ದಾಣದವರೆಗೆ ರೈಲಿನಲ್ಲಿ ಬರಬಹುದು. ಇದು ಸಂಕೂಗೆ ಸಮೀಪದ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ನವದೆಹಲಿ, ಬೆಂಗಳೂರು, ತ್ರಿವೇಂಡ್ರಂ ಮತ್ತು ಚೆನ್ನೈನಂತಹ ಸ್ಥಳಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಲೇಹ್ ಮತ್ತು ಕಾರ್ಗಿಲ್‍ನಿಂದ ಹಾಗು ಸುರು ಕಣಿವೆಯ ಕೆಲವು ಪ್ರಾಂತ್ಯಗಳಿಂದ ಸಹ ಸಂಕೂಗೆ ದೈನಂದಿನ ಬಸ್ಸುಗಳ ಸೌಲಭ್ಯವಿದೆ.

ಸಂಕೂ ಪ್ರಾಂತ್ಯದಲ್ಲಿ ವರ್ಷ ಪೂರ್ತಿ ವಿಪರೀತವೆನ್ನುವಂತಹ ಹವಾಮಾನವಿರುತ್ತದೆ. ಇಲ್ಲಿ ಬೇಸಿಗೆಯಲ್ಲಿ ಸುಡುವ ಬಿಸಿಲು ಮತ್ತು ಚಳಿಗಾಲದಲ್ಲಿ ಹೆಪ್ಪುಗಟ್ಟುವಷ್ಟು ಚಳಿಯಿರುತ್ತದೆ. ಆದರೆ ಏಪ್ರಿಲ್‍ನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಇಲ್ಲಿ ಆಹ್ಲಾದಕರವಾದ ಉಷ್ಣಾಂಶವಿರುತ್ತದೆ. ಈ ಅವಧಿಯು ಸಂಕೂಗೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ.

ಸಂಕೂ ಪ್ರಸಿದ್ಧವಾಗಿದೆ

ಸಂಕೂ ಹವಾಮಾನ

ಉತ್ತಮ ಸಮಯ ಸಂಕೂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಂಕೂ

  • ರಸ್ತೆಯ ಮೂಲಕ
    ಸಂಕೂಗೆ ಕಾರ್ಗಿಲ್, ಲೇಹ್ ಮತ್ತು ಸುರು ಕಣಿವೆಯ ವಿವಿಧ ಪ್ರಾಂತ್ಯದಿಂದ ಬಸ್ಸಿನ ಮೂಲಕ ತಲುಪಬಹುದು. ಲೇಹ್ ಮತ್ತು ಕಾರ್ಗಿಲ್‍ಗೆ ಶ್ರೀನಗರದಿಂದ ವಿಶೇಷ ಡೀಲಕ್ಸ್ ಬಸ್ಸುಗಳ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮುವಿನ ತಾವಿ ರೈಲು ನಿಲ್ದಾಣವು ಸಂಕೂಗೆ ಸಮೀಪದ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಬೆಂಗಳೂರು, ದೆಹಲಿ, ಚೆನ್ನೈ ಮತ್ತು ತ್ರಿವೇಂದ್ರಂನಂತಹ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಈ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ಸುಗಳನ್ನು ಹಿಡಿದು ಸಂಕೂಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲೇಹ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ದೆಹಲಿ, ಔರಂಗಬಾದ್, ಜಮ್ಮು, ಬೆಂಗಳೂರು ಮತ್ತು ಪುಣೆ ನಗರಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ವಿಮಾನ ನಿಲ್ದಾಣದಿಂದ ಸಂಕೂಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ. ಶ್ರೀನಗರ್ ವಿಮಾನ ನಿಲ್ದಾಣವು ಈ ನಗರಕ್ಕೆ ಸಮೀಪದಲ್ಲಿದ್ದು, ಪ್ರವಾಸಿಗರು ವಿಮಾನ ನಿಲ್ದಾಣದಿಂದ ನೇರವಾಗಿ ಬಸ್ಸುಗಳನ್ನು ಹಿಡಿದು ಸಂಕೂಗೆ ತಲುಪಬಹುದು. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ವಿಶ್ವದ ನಾನಾ ಮೂಲೆಗೆ ವಿಮಾನ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun