ಸಂಗ್ರೂರ್ ನಿಂದ ಸುಮಾರು 19 ಕಿ.ಮೀ ದೂರದಲ್ಲಿರುವ ಸುನಂ ಎಂಬ ಹಳ್ಳಿಯಲ್ಲಿ ಗುರುದ್ವಾರಾ ಪಾಟ್ಶಾಹಿ ಫೇಲಿ ಇದೆ. ಇದನ್ನು ಮೊದಲ ಗುರುಗಳಾದ ಗುರು ನಾನಕ್ ಜೀ ಅವರನ್ನು ಗೌರವಿಸಲು ಕಟ್ಟಲಾಗಿದೆ. ಮಾಲ್ವಾ ಭೇಟಿಯ ವೇಳೆ ಸಿರ್ಹಿಂದ್ ನ ಬಳಿ ನೆಲೆಸಿದ್ದರು ಹಾಗೂ ಅಲ್ಲಿಂದ ತನ್ನ ಒಬ್ಬ ಹಿಂಬಾಲಕನ ಮನೆಗೆ ಆಮಂತ್ರಣ ಪಡೆದು ಬಂದಾಗ ಇ ಗುರ್ದ್ವಾರವನ್ನು ಕಟ್ಟಲಾಯಿತು. ಇದನ್ನು 1919 ಕಟ್ಟಲಾಗಿದ್ದು 1966 ರಲ್ಲಿ ನವೀಕರಣ ಮಾಡಲಾಗಿದೆ. ಇಲ್ಲಿ ಒಂದು ಆಯತಾಕಾರಾದ ಸಭಾಂಗಣ, ಗ್ಯಾಲರಿ, ವರಾಂಡ, ಕಲ್ಲಿನಿಂದ ಕಟ್ಟಿದ ಆವರಣ ಹಾಗೂ ಗೊಮ್ಮಟ ಇದೆ. ಇಲ್ಲಿ ಬೇಡಿದ ಎಲ್ಲಾ ಬಯಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.