ಸಾಂಗ್ಲಿ ಕೋಟೆಯು ಸಾಂಗ್ಲಿ ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಇದು ರಾಜ್ ವಾಡ ಅರಮನೆಯ ಭಾಗವಾಗಿದ್ದು, ಇದರಲ್ಲಿ ಒಂದು ಅದ್ಭುತವಾದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಾಲಾಗಿದೆ.
ಪ್ರಸ್ತುತ ಈ ಕೋಟೆಯನ್ನು ಕಂದಾಯ ಮತ್ತು ಜಿಲ್ಲಾಧಿಕಾರಿಯವರ ಕಛೇರಿಯಾಗಿ ಬಳಸಲಾಗುತ್ತಿದೆ. ಅಲ್ಲದೆ ಇಲ್ಲಿ ಒಂದು ಮರಾಠಿ ಶಾಲೆಯನ್ನು ಸಹ ನಡೆಸಲಾಗುತ್ತಿದೆ.