ಮೀರಜ್ ನ ದರ್ಗಾ ಅಥವಾ ಖಾಜ ಮೀರ್ ಸಾಹೇಬ್ ದರ್ಗಾವು ಸಾಂಗ್ಲಿಯಲ್ಲಿ ನೆಲೆಸಿದೆ. ಇದು ಸುಮಾರು 500 ವರ್ಷಗಳಷ್ಟು ಹಿಂದೆ ನಿರ್ಮಾಣಗೊಂಡಿದ್ದು, ತನ್ನ ಸ್ವಾಭಾವಿಕ ಸೌಂದರ್ಯದಿಂದಾಗಿ ಗಮನಸೆಳೆಯುತ್ತಿದೆ.
ಈ ದರ್ಗಾಕ್ಕೆ ಹಲವಾರು ಜನರು ಜಾತಿ ಧರ್ಮಗಳ ಬೇಧವಿಲ್ಲದೆ ಭೇಟಿಕೊಡುತ್ತಿರುತ್ತಾರೆ. ಇದು ಭಾವೈಕ್ಯತೆಯ ಸ್ಥಳವಾಗಿ ಖ್ಯಾತಿ ಪಡೆದಿದೆ. ಇಲ್ಲಿ ವಾರ್ಷಿಕವಾಗಿ ನಡೆಯುವ ಸಂಗೀತ ಉತ್ಸವವು ತುಂಬಾ ಪ್ರಸಿದ್ಧಿ ಪಡೆದಿದೆ.