ಬಾಹುಬಲಿ ಬೆಟ್ಟದ ದೇವಾಲಯಗಳು ಸಾಂಗ್ಲಿಗೆ ಸಮೀಪದಲ್ಲಿ ನೆಲೆಸಿವೆ. ರಸ್ತೆ ಮಾರ್ಗವಾಗಿ ಸಾಗಿದರೆ ಕೇವಲ 50 ನಿಮಿಷಗಳಲ್ಲಿ ಇಲ್ಲಿಗೆ ತಲುಪಬಹುದು. ಈ ದೇವಾಲಯಗಳು ಈ ಬೆಟ್ಟದ ಮೇಲೆ ಸ್ಥಾಪನೆಯಾದ ಮೇಲೆ ಈ ಹೆಸರು ಬಂದಿತು.
ಈ ದೇವಾಲಯದಲ್ಲಿ 28 ಅಡಿಗಳ ಎತ್ತರದ ಅಮೃತಶಿಲೆಯಿಂದ ಮಾಡಿದ ಬಾಹುಬಲಿಯ ಮೂರ್ತಿಯಿದೆ. ಈ ದೇವಾಲಯದ ಪ್ರಾಂಗಣದಲ್ಲಿ 24 ತೀರ್ಥಕಂರರ ಮೂರ್ತಿಗಳಿವೆ. ಇಲ್ಲಿನ ದೇವರ ಅನುಗ್ರಹಕ್ಕಾಗಿ ಭಕ್ತಾಧಿಗಳು ವರ್ಷ ಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ.