Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಾ » ಹವಾಮಾನ

ಸಾಂಗ್ಲಾ ಹವಾಮಾನ

ಬೇಸಿಗೆ ಹಾಗೂ ಮಳೆಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತಕಾಲವೆಂದು ಪರಿಗಣಿಸಬಹುದು. ಈ ಕಾಲಗಳಲ್ಲಿ ಸಾಂಗ್ಲಾದ ಹವಾಮಾನ ಬಹಳ ಹಿತವಾಗಿರುತ್ತದೆ. ಪ್ರವಾಸಿಗರು ಇಲ್ಲಿನ ಎಲ್ಲಾ ತಾಣಗಳಿಗೂ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಸಾಂಗ್ಲಾದಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಮೇ ವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ಹಿತಕರವಾಗಿರುತ್ತದೆ. ಬೇಸಿಗೆಯಲ್ಲಿ ತಾಪಮಾನ 8 ಡಿಗ್ರಿ ಸೆಲ್ಶಿಯಸ್ ನಿಂದ 30 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಈ ಕಾಲದಲ್ಲಿ ಸಾಂಗ್ಲಾಕ್ಕೆ ಪ್ರವಾಸಕ್ಕೆ ಬರುವ ಪ್ರಯಾಣಿಕರು ಉಣ್ಣೆ ಬಟ್ಟೆಗಳನ್ನು ಜೊತೆಯಲ್ಲಿ ತರುವುದು ಒಳ್ಳೆಯದು.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್): ಸಾಂಗ್ಲಾದಲ್ಲಿ ಜುಲೈ ತಿಂಗಳಲ್ಲಿ ಮಳೆ ಆರಂಭವಾದರೆ ಅದು ಸೆಪ್ಟೆಂಬರ್ ವರೆಗೂ ಮುಂದುವರೆಯುತ್ತದೆ. ಈ ಕಾಲದಲ್ಲಿ ಇಲ್ಲಿ ಮಳೆ ಏನೂ ಹೆಚ್ಚಾಗಿ ಬರದಿದ್ದರೂ ವಾತಾವರಣ ತಂಪಾಗಿರುತ್ತದೆ. ಮಳೆಗಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

ಚಳಿಗಾಲ

(ಅಕ್ಟೋಬರ್ ನಿಂದ ಏಪ್ರಿಲ್): ಅಕ್ಟೋಬರ್ ತಿಂಗಳಲ್ಲಿ ಆರಂಭವಾಗುವ ಚಳಿಗಾಲ ಸಾಂಗ್ಲದಲ್ಲಿ ಏಪ್ರಿಲ್ ವರೆಗೂ ಇರುತ್ತದೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ 10 ಡಿಗ್ರಿ ಸೆಲ್ಶಿಯಸ್ ನಿಂದ -10 ಡಿಗ್ರಿ ಸೆಲ್ಶಿಯಸ್ ತಲುಪುತ್ತದೆ ಅಲ್ಲದೆ ಇಲ್ಲಿನ ಬಹುತೇಕ ಪ್ರದೇಶ ಹಿಮದಿಂದ ಆವರಿಸಲ್ಪಟ್ಟಿರುತ್ತದೆ.