Search
  • Follow NativePlanet
Share

ಸಂಗಮ - ನದಿಗಳು ಸೇರುವ ಸ್ಥಳ

9

ಬೆಂಗಳೂರಿನಿಂದ 92 ಕಿಲೋಮೀಟರ್ ದೂರದಲ್ಲಿರುವ ಸಂಗಮ ಒಂದು ಅದ್ಭುತ ತಾಣವಾಗಿದೆ. ಈ ಸ್ಥಳವು ಅರ್ಕಾವತಿ ನದಿ ಕಾವೇರಿಯಲ್ಲಿ ವಿಲೀನವಾಗಿದ್ದನ್ನು ಪ್ರತಿನಿಧಿಸುತ್ತದೆ. ಬೆಂಗಳೂರಿನಿಂದ ಸುಮಾರು ಎರಡು ಗಂಟೆಗಳ ಕಾಲವನ್ನು ತೆಗೆದುಕೊಳ್ಳುವ ಈ ಪ್ರಯಾಣದ ಪ್ರಾಮುಖ್ಯತೆಯೇ ದಾರಿಯುದ್ದಕ್ಕೂ ಸಿಗುವ ಮಜಾ. ರಸ್ತೆಯಲ್ಲಿನ ಕೆಲವು ಅನಿರೀಕ್ಷಿತ ತಿರುವುಗಳು ಮತ್ತು ಹೊರಳುಗಳು ನಮ್ಮ ಪಯಣವನ್ನು ಆಸಕ್ತಿದಾಯಕವಾಗಿಸುವವಲ್ಲದೇ ನದಿಗಳ ಅಸಾಧಾರಣ ದೃಶ್ಯವನ್ನೂ ನೋಡಿ ನಾವು ಆನಂದಿಸಬಹುದು. ಸಂಗಮದಲ್ಲಿ ನದಿಗಳ ನೀರಿನ ಆಳ ಕಡಿಮೆ ಇದ್ದು, ನೀಮಗೆ ನೀರಿನಲ್ಲಿ ನಡೆಯುವ ಮತ್ತು ಒಂದು ಮುಳುಗು ಹಾಕುವ ಅವಕಾಶವು ಲಭಿಸುತ್ತದೆ.

 

ಮತ್ತು ಇನ್ನೂ ಹೆಚ್ಚೂ ಮಾಡಬಹುದು ..

ಸಂಗಮದ ಪ್ರಯಾಣವು, ಚಾರಣ, ಈಜು ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಮೀನುಹಿಡಿಯುವುದು .. ಇಂತಹ ಚಟುವಟಿಕೆಗಳನ್ನೂ ಒಳಗೊಂಡಿದೆ. ನಿಮ್ಮ ಸಂಚಾರದಲ್ಲಿ ಸೇರಿಸಿಕೊಳ್ಳಬಹುದಾದ ಇನ್ನೊಂದು ತಾಣ ಸಂಗಮದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮೇಕೆದಾಟು. ಮೇಕೆದಾಟುನಲ್ಲಿ, ಕಾವೇರಿ ಆಳವಾದ ಕಣಿವೆಯ ಮೂಲಕ ಹರಿಯುತ್ತಾಳೆ. ಮೇಕೆದಾಟು ಎಂಬ ಹೆಸರು ಮೇಕೆ ಯಿಂದ ವಿಕಾಸಗೊಂಡಿದ್ದು - ಮೇಕೆ ಎಂದರೆ ಆಡು ಎಂಬರ್ಥವಿದೆ. ಸ್ಥಳೀಯ ಪುರಾಣದ ಪ್ರಕಾರ ಹುಲಿಯೊಂದು ಮೇಕೆಯನ್ನು ಬೆನ್ನುಹತ್ತಿತ್ತು ಆಗ ಮೇಕೆ ಈ ಕಣಿವೆಯನ್ನು ದಾಟಿ ತಪ್ಪಿಸಿಕೊಂಡಿತು. ಈ ಕಣಿವೆಯಲ್ಲಿ ದೈವಿಕ ಶಕ್ತಿ ಇದೆ ಅದರಿಂದಲೇ ಮೇಕೆಗೆ ಇದನ್ನು ದಾಟಲು ಮತ್ತು ಹುಲಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಯಿತೆಂದು ಸ್ಥಳೀಯರು ನಂಬುತ್ತಾರೆ. ನದಿಯು ಸಂಪೂರ್ಣ ಪ್ರಕೋಪದಿಂದ ಹರಿಯುವ ಮಳೆಗಾಲದ ನಂತರದ ಕಾಲವು ಮೇಕೆದಾಟು ಭೇಟಿಗೆ ಅತ್ಯುತ್ತಮ ಕಾಲ. ಕೇವಲ ರಸ್ತೆಯ ಮೂಲಕ ಮಾತ್ರ ಈ ಸ್ಥಳವನ್ನು ತಲುಪಬಹುದಾಗಿದ್ದು ಬೆಂಗಳೂರಿನಿಂದ ಮೇಕೆದಾಟುವಿನ ಹತ್ತಿರದ ಪಟ್ಟಣವಾದ ಕನಕಪುರಕ್ಕೆ ಅನೇಕ ಬಸ್ಗಳು ಲಭ್ಯವಿವೆ.

ಸಂಗಮ ಪ್ರಸಿದ್ಧವಾಗಿದೆ

ಸಂಗಮ ಹವಾಮಾನ

ಉತ್ತಮ ಸಮಯ ಸಂಗಮ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಂಗಮ

  • ರಸ್ತೆಯ ಮೂಲಕ
    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ ಕನಕಪುರ ರಿಂದ ಸಂಗಮಕ್ಕೆ ಸಂಪರ್ಕ ಕಲ್ಪಿಸುತ್ತವೆ. ಮೇಕೆದಾಟು, ಸಂಗಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು ರಾಜ್ಯದ ಬಸ್ಗಳು ನಿರಂತರವಾಗಿದ್ದು ಅತ್ಯಂತ ಆರಾಮದಯಕವಾಗಿ ತಲುಪಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬೆಂಗಳೂರು ರೈಲು ನಿಲ್ದಾಣ ಸಂಗಮ - ಮೇಕೆದಾಟು ನಿಂದ ಸುಮಾರು 118 ಕಿಮೀ ದೂರದಲ್ಲಿದೆ. ಇದೇ ಈ ಪ್ರವಾಸೀ ತಾಣಕ್ಕೆ ಹತ್ತಿರದ ರೈಲು ತುದಿಯಾಗಿದೆ. ಈ ರೈಲು ನಿಲ್ದಾಣವು ದೆಹಲಿ, ಮುಂಬೈ, ಚೆನೈ, ಪುಣೆ ಮತ್ತು ಕೋಲ್ಕತಾ ಸೇರಿದಂತೆ ಭಾರತದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಇಲ್ಲಿಂದ ಟ್ಯಾಕ್ಸಿ ಮತ್ತು ಕ್ಯಾಬ್ ಗಳಲ್ಲಿ ಸುಲಭವಾಗಿ ಸಂಗಮ - ಮೇಕೆದಾಟು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಈ ತಾಣದಿಂದ ಸುಮಾರು 136 ಕಿಮೀ ದೂರ ಇರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಗಮ - ಮೇಕೆದಾಟುವಿನ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸೇವೆಸಲ್ಲಿಸುವದರ ಜೊತೆಗೆ ಹಲವಾರು ಜಾಗತಿಕ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಹಾಗೂ ಯುರೋಪ್, ಏಷ್ಯಾ, ಅಮೆರಿಕನ್ ಮತ್ತು ಮಧ್ಯಮ ಪೂರ್ವ ದೇಶಗಳಲ್ಲಿ ಬರುವ ಪ್ರವಾಸಿಗರಿಗೆ ಮಾದರಿ ಕಾರ್ಯಸ್ಥಾನವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri