Search
  • Follow NativePlanet
Share

ಸಾಂಚಿ - ಬೌದ್ಧ ಸಂಸ್ಕೃತಿಯ ಮಹಾದ್ವಾರ

26

ಸಾಂಚಿ ಎಂಬುದು ಮಧ್ಯ ಪ್ರದೇಶದ ರೈಸೇನ್ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಈ ಜಾಗವು ಇಲ್ಲಿನ ಸ್ಮಾರಕಗಳು ಹಾಗೂ ಬೌದ್ಧ ಸ್ತೂಪಗಳಿಗೆ ಪ್ರಸಿದ್ಧವಾಗಿದೆ. ಒಂದು ಸಣ್ಣ ಗುಡ್ಡದ ಬುಡದಲ್ಲಿರುವ ಸಾಂಚಿ, ಹಲವಾರು ಬೌದ್ಧ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಕ್ರಿ.ಪೂ ಮೂರನೇ ಶತಮಾನದಿಂದ ಕ್ರಿ.ಶ ಹನ್ನೆರಡನೇ ಶತಮಾನದ ವರೆಗಿನ ಸ್ತೂಪಗಳು, ಗುಡಿಗಳು, ಮಠಗಳು ಹಾಗೂ ಸ್ತಂಭಗಳು ಇಲ್ಲಿನ ಪ್ರವಾಸೋದ್ಯಮಕ್ಕೆ ಕೊಡುಗೆಯಾಗಿದೆ. ಈ ಸ್ಮಾರಕಗಳ ಮೇಲಿರುವ ಕೆತ್ತನೆಗಳು, ಇಲ್ಲಿನ ಸಂಪ್ರದಾಯ ಹಾಗೂ ಬೌದ್ಧ ಪುರಾಣಗಳ ಚಿತ್ರಣ ನೀಡುತ್ತದೆ.

ಚರಿತ್ರಾ ಪುಟಗಳಿಂದ

ಸಾಂಚಿಯಲ್ಲಿರುವ ಬೌದ್ಧ ಸ್ಮಾರಕಗಳನ್ನು ನೋಡಿದರೆ, ಸಾಂಚಿಯ ಚರಿತ್ರೆ ಹಾಗೂ ಬುದ್ಧನಿಗೆ ಹತ್ತಿರದ ನಂಟು ಇದೆಯೆಂದು ಯಾತ್ರಿಗಳು ಆಲೋಚಿಸಬಹುದು. ಆದರೆ ತನ್ನ ಜೀವಿತಾವಧಿಯಲ್ಲಿ ಬುದ್ಧನು ಸಾಂಚಿಗೆ ಒಮ್ಮೆಯೂ ಭೇಟಿ ನೀಡಿರಲಿಲ್ಲ ಎಂದು ನಂಬಲು ಕಷ್ಟವಾಗಬಹುದು. ಅದಾಗ್ಯೂ, ಸಾಂಚಿಯ ನಿಶ್ಶಬ್ದತೆಯಲ್ಲಿ ಬುದ್ಧನ ಇರುವಿಕೆಯ ಅರಿವು, ಇತರ ಬೌದ್ಧ ಕೇಂದ್ರಗಳಿಗಿಂತ ಹೆಚ್ಚಾಗಿ ಉಂಟಾಗಬಹುದು. ಮೊದಲಿಗೆ ಸಾಂಚಿ, 'ವಿದಿಶಾಗಿರಿ' ಎಂಬ ಶ್ರೀಮಂತ ವರ್ತಕರ ಕೇಂದ್ರವಾಗಿತ್ತು. ಸಾಂಚಿಯನ್ನು ಬೌದ್ಧ ಸಂಪ್ರದಾಯದ ಅಗ್ರಗಣ್ಯ ಕೇಂದ್ರವಾಗಿ ರೂಪುಗೊಳ್ಳಲು ಪ್ರೇರೇಪಿಸಿದ ಈ ಪ್ರಭಾವಿ ವರ್ತಕರಿಗೆ ಸಾಂಚಿ ಯಾವತ್ತೂ  ಋಣಿಯಾಗಿರುತ್ತದೆ.

ಬೌದ್ಧ ಧರ್ಮದ ನಿಷ್ಠೆಯ ಭಕ್ತೆಯಾಗಿದ್ದ ದೇವಿ ಎಂಬ ಸುಂದರ ಹುಡುಗಿಯ ಪ್ರೇಮಕಥೆಯನ್ನು ಸಾಂಚಿ ಬಹಿರಂಗಗೊಳಿಸುತ್ತದೆ. ರಾಜ ಅಶೋಕ ಈ ಹುಡುಗಿಯನ್ನು ಪ್ರೀತಿಸಿದ್ದು, ಸಾಂಚಿಯಲ್ಲಿ ಇಂತಹ ಸುಂದರವಾದ ಸ್ಮಾರಕಗಳ ರಚನೆಗೆ ದೇವಿ ಅಶೋಕನನ್ನು ಪ್ರೇರೇಪಿಸಿದ್ದಳು ಎಂದು ನಂಬಲಾಗುತ್ತದೆ. 1818 ರಲ್ಲಿ ಪುರಾತತ್ವವಸ್ತು ಅನ್ವೇಷಣಾ ಅಧಿಕಾರಿಗಳು ಈ ಖ್ಯಾತ ಹಿನಾಯಾನ ಬೌದ್ಧ ಕೇಂದ್ರವನ್ನು ಪತ್ತೆಹಚ್ಚಿದರು. ಸಾಂಚಿಯ ಹೆಬ್ಬಾಗಿಲು ಹಾಗೂ ಸ್ತೂಪದ ವಾಸ್ತು ಅದ್ಬುತ ಹಾಗೂ ಮನೋಹರವಾಗಿದ್ದು, ಇದು ಭಾರತದಲ್ಲಿನ ಆಕರ್ಷಕ ಹಾಗೂ ಸುಂದರ ಬೌದ್ಧ ಕೇಂದ್ರಗಳಲ್ಲಿ ಒಂದಾಗಿದೆ.

ಸಾಂಚಿಯ ಸುತ್ತಲಿನ ಆಕರ್ಷಣೆಗಳು

ಸಾಂಚಿ ಪ್ರವಾಸೋದ್ಯಮ ಯಾತ್ರಿಗಳಿಗೆ ಹಲವಾರು ಆಕರ್ಷಣೆಗಳನ್ನು ಮುಂದಿಡುತ್ತದೆ - ಬೌದ್ಧ ವಿಹಾರ, ಸಾಂಚಿ ಸ್ತೂಪದ ನಾಲ್ಕು ಹೆಬ್ಬಾಗಿಲುಗಳು, ಸಾಂಚಿ ವಸ್ತುಸಂಗ್ರಹಾಲಯ, ದಿ ಗ್ರೇಟ್ ಬೌಲ್, ಗುಪ್ತ ದೇವಸ್ಥಾನ, ಅಶೋಕ ಸ್ಥಂಭ ಮತ್ತು ಸಾಂಚಿ ಸ್ತೂಪ(ಮೂರು). ಸಾಂಚಿಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲದೆ, ಯಾತ್ರಿಗಳು ಇಲ್ಲಿನ ಆಕರ್ಷಕ ಪ್ರಕೃತಿ ದೃಶ್ಯವನ್ನು ಸವಿಯಬಹುದು.

ಸಾಂಚಿಯನ್ನು ತಲುಪುವ ಬಗೆ

ಸಾಂಚಿಗೆ ಹತ್ತಿರದ ವಿಮಾನನಿಲ್ದಾಣವೆಂದರೆ, ಭೋಪಾಲ್ ನ ರಾಜ ಭೋಜ್ ವಿಮಾನನಿಲ್ದಾಣ. ಈ ವಿಮಾನ ನಿಲ್ದಾಣ ಇತರ ಮುಖ್ಯ ನಗರಗಳಾದ ಡೆಲ್ಲಿ, ಮುಂಬೈ, ಜಬಲ್ಪುರ್, ಇಂದೋರ್ ಮತ್ತು ಗ್ವಾಲಿಯೋರ್ ಜೊತೆ ಉತ್ತಮ  ಸಂಪರ್ಕ ಹೊಂದಿದೆ. ಯಾತ್ರಿಗಳು ಭೋಪಾಲ್ ವಿಮಾನ ನಿಲ್ದಾಣದಿಂದ ಸಾಂಚಿಯನ್ನು ಟ್ಯಾಕ್ಸಿ ಮೂಲಕ ತಲುಪಬಹುದು. ಸಾಂಚಿಗೆ ಹತ್ತಿರದ ರೈಲು ನಿಲ್ದಾಣ ಕೂಡ ಭೋಪಾಲ್ ನಲ್ಲಿದೆ.

ಸಾಂಚಿಗೆ ಭೇಟಿ ನೀಡಲು ಸೂಕ್ತ ಸಮಯ

ಸಾಂಚಿಯಲ್ಲಿ ಧಾರ್ಮಿಕ ಹಬ್ಬಗಳು ನವೆಂಬರ್ ಮತ್ತು ಫೆಬ್ರವರಿ ಅಲ್ಲಿ ನಡೆಯುತ್ತವೆ. ಈ ಬೌದ್ಧ ಕೇಂದ್ರಕ್ಕೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್ ನಿಂದ ಮಾರ್ಚ್ ತನಕ.

ಸಾಂಚಿ ಪ್ರಸಿದ್ಧವಾಗಿದೆ

ಸಾಂಚಿ ಹವಾಮಾನ

ಉತ್ತಮ ಸಮಯ ಸಾಂಚಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಾಂಚಿ

  • ರಸ್ತೆಯ ಮೂಲಕ
    ಮಧ್ಯ ಪ್ರದೇಶದ ಹೆಚ್ಚಿನ ಭಾಗಗಳಿಂದ ಸಾಂಚಿಗೆ ಬಸ್ ವ್ಯವಸ್ಥೆಯಿದೆ. ಖಾಸಗಿ ಹಾಗೂ ಸರಕಾರೀ ಸಾರ್ವಜನಿಕ ಬಸ್ ಗಳು ಸಾಂಚಿಯಿಂದ ಇತರ ನಗರಗಳಾದ ಇಂದೋರ್, ಭೋಪಾಲ್ ಹಾಗೂ ವಿದಿಶಾ ಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಾಂಚಿಗೆ ಹತ್ತಿರದ ರೈಲು ನಿಲ್ದಾಣವಾದ ಭೋಪಾಲ್ ರೈಲ್ ಹೆಡ್, ಸಾಂಚಿ ಯಿಂದ ಕೇವಲ 50 ಕಿಲೋಮೀಟರು ದೂರದಲ್ಲಿದೆ. ಪ್ರಯಾಣಿಕರು ರೈಲು ನಿಲ್ದಾಣದಿಂದ ಸಾಂಚಿಗೆ ಟ್ಯಾಕ್ಸಿ ಮೂಲಕ ತಲುಪಬಹುದು. ಭೋಪಾಲ್ ರೈಲು ನಿಲ್ದಾಣ, ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭೋಪಾಲ್ ನ ರಾಜ ಭೋಜ್ ವಿಮಾನ ನಿಲ್ದಾಣ ಸಾಂಚಿಯಿಂದ ಕೇವಲ 46 ಕಿಲೋಮೀಟರು ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಸಾಂಚಿಗೆ ಟ್ಯಾಕ್ಸಿ ವ್ಯವಸ್ಥೆಯಿದೆ. ಈ ವಿಮಾನ ನಿಲ್ದಾಣವು ಇತರ ಮುಖ್ಯ ನಗರಗಳಾದ ಡೆಲ್ಲಿ, ಮುಂಬೈ, ಜಬಲ್ಪುರ್, ಇಂದೋರ್ ಮತ್ತು ಗ್ವಾಲಿಯೋರ್ ಜೊತೆ ಉತ್ತಮ ಸಂಪರ್ಕ ಹೊಂದಿದೆ
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed