Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಬಲ್ಪುರ » ಹವಾಮಾನ

ಸಂಬಲ್ಪುರ ಹವಾಮಾನ

ಸೆಪ್ಟಂಬರ್-ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಮಾರ್ಚ್ನಲ್ಲಿ ಉಷ್ಣಾಂಶ ಮತ್ತು ಮಳೆ ಎರಡೂ ಕೂಡ ಹೆಚ್ಚಾಗಿರುವುದಿಲ್ಲ. ಸಂಬಾಲ್ಪುರಕ್ಕೆ ಪ್ರಕೃತಿಯನ್ನು ಆಸ್ವಾದಿಸಲು ಹೋಗಬೇಕೆಂದಿದ್ದರೆ ಸೆಪ್ಟಂಬರ್ ಮತ್ತು ಮಳೆಗಾಲದಲ್ಲಿ ಮಹಾನದಿಯ ಸೌಂದರ್ಯವನ್ನು ನೋಡಲು ಹೋಗಬಹುದು.

ಬೇಸಿಗೆಗಾಲ

ಸಂಬಲ್ಪುರವು ಭಾರತದ ಪಶ್ಚಿಮ ಭಾಗದಲ್ಲಿದೆ. ಬೇಸಿಗೆಯು ಇಲ್ಲಿ ತೀವ್ರವಾಗಿದ್ದು. ತಡೆಯಲಾಗದಷ್ಟು ಧಗೆಯಿರಬಹುದು. ಮಾರ್ಚ್ನಿಂದ ಜೂನ್ ಬೇಸಿಗೆ. ಈ ಸಮಯದಲ್ಲಿ ಸಾಮಾನ್ಯವಾಗಿ ಉಷ್ಣಾಂಶವು 47 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಮಳೆಗಾಲ

ಸಂಬಲ್ಪುರದಲ್ಲಿ ನೈರುತ್ಯ ಮಾರುತಗಳಿಂದ ಮಳೆಯುಂಟಾಗುತ್ತದೆ. ಮಳೆಗಾಲಕ್ಕೂ ಮುನ್ನ ಸುಮಾರು 53 ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ. ಈ ಸಮಯದಲ್ಲಿ ಉಷ್ಣಾಂಶವು ಸುಮಾರು 30 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಹಾನದಿಯು ತುಂಬಿ ಹರಿಯುವುದನ್ನು ಈ ಸಮಯದಲ್ಲಿ ಕಾಣಬಹುದು.

ಚಳಿಗಾಲ

ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 10 ಡಿಗ್ರಿ ಸೆಲ್ಸಿಯಸ್ಗಳಿಗೆ ಇಳಿಯಬಹುದು. ರಾತ್ರಿಗಳು ಹೆಚ್ಚು ಥಂಡಿಯಿಂದ ಕೂಡಿರುತ್ತದೆ. ದಿನದಲ್ಲಿ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ಗಳಷ್ಟಿರಬಹುದು.