ದೆಬಿಗರ್ ವನ್ಯಜೀವಿಧಾಮವು ಭಾರತದಲ್ಲಿನ ಅತಿಹೆಚ್ಚು ವನ್ಯಜೀವಿಗಳನ್ನು ಹೊಂದಿರುವ ವನ್ಯಜೀವಿಧಾಮಗಳಲ್ಲೊಂದು. ಇಲ್ಲಿ ಸಸ್ಯ ಮತ್ತು ಜೀವಿ ವೈವಿಧ್ಯತೆಗೆ ಕಾರಣ ಹಿರಾಕುಡ್ ಅಣೆಕಟ್ಟು. ಅಣೆಕಟ್ಟು ಹತ್ತಿರದಲ್ಲಿರುವುದರಿಂದ ವನ್ಯಜೀವಿಗಳಿಗೆ ನೀರಿನಾಸರೆಯನ್ನು ಒದಗಿಸುತ್ತದೆ. ವನ್ಯಜೀವಿಗಳಲ್ಲದೆ ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಹಕ್ಕಿಗಳು ಕೂಡ ಬರುತ್ತವೆ. ಹಿನ್ನೀರಿನಲ್ಲಿ ನೀರು ನಿಂತಿರುತ್ತದ್ದೆಯಾದ್ದರಿಂದ ಬಾತುಕೋಳಿಗಳು ಬರುತ್ತವೆ. ಇಲ್ಲಿ ಪರಿಸರ ಪ್ರವಾಸೋದ್ಯಮದ ಆರು ಕಾಟೇಜ್ಗಳು ಪರಿಸರದ ಮಡಿಲಲ್ಲಿ ಸಮಯ ಕಳೆಯುವ ಅವಕಾಶವನ್ನು ಒದಗಿಸುತ್ತದೆ. ಇಲ್ಲಿ ತಂಗಲು ಸಂಬಾಲ್ಪುರದ ಅರಣ್ಯದ ವಿಭಾಗಾಧಿಕಾರಿಗಳ ಅನುಮತಿಯನ್ನು ಪಡೆಯಬೇಕು.