ಧರ್ಭಾಂಗ ಜಿಲ್ಲೆಗೆ ಸಮೀಪವಿರುವ ಮಾಲಿನಗರ್ ಗ್ರಾಮವು ಭಗವಾನ್ ಶಿವನ ಪ್ರಾಚೀನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಇಲ್ಲಿರುವ ಶಿವಲಿಂಗವು 5 ಅಡಿಗಳಷ್ಟು ಎತ್ತರವಿದ್ದು, ನೋಡಲು ಅತ್ಯದ್ಭುತವಾಗಿದೆ. ಶಿವ ಭಕ್ತರು, ಆರಾಧನೆಗಾಗಿ ಈ ದೇವಸ್ಥಾನಕ್ಕೆ ಭೇಟಿ ಇತ್ತರೆ, ದೂರದೂರುಗಳಿಂದ ಪ್ರವಾಸಿಗರು ತಮ್ಮ ಪ್ರಾರ್ಥನೆಯನ್ನು, ಭಕ್ತಿ ಗೌರವಗಳನ್ನು ಸಲ್ಲಿಸುವ ಸಲುವಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಗ್ರಾಮದಲ್ಲಿ ಪ್ರತಿವರ್ಷವೂ ಕೂಡ ಶ್ರೀ ರಾಮನವಮಿಯಂದು ಜಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ಜಾತ್ರೆಯು ಸ್ಥಳೀಯರಿoದ ಮತ್ತು ಪ್ರವಾಸಿಗರಿಂದ ಬಹುವಾಗಿ ನಿರೀಕ್ಷಿಸಲ್ಪಡುವ ವಾರ್ಷಿಕ ಸಂದರ್ಭವಾಗಿದೆ.