ಸಲೋಗ್ರಾದಿಂದ 5 ಕಿ.ಮೀ ದೂರದಲ್ಲಿ ನೆಲೆಸಿದೆ ಕ್ರೋಲ್ ಕಾ ಟಿಬ್ಬಾ. ಇದೊಂದು ಪ್ರಮುಖ ಪ್ರವಾಸಿ ತಾಣವೂ ಹೌದು. ಈ ಸುಂದರ ಪರ್ವತವು ಪ್ರವಾಸಿಗರಿಗೆ ಪ್ರಚಂಡ ಚಾರಣಕ್ಕೆ ಅದ್ಭುತ ಅವಕಾಶಗಳನ್ನು ಒದಗಿಸುತ್ತದೆ. ರೈಲು ನಿಲ್ದಾಣದ ಹಿಂದೆ ನೆಲೆಯಾಗಿರುವ ಈ ಗಮ್ಯಸ್ಥಾನವನ್ನು ಸುಲಭವಾಗಿ ತಲುಪಬಹುದು. ಅಲ್ಲದೆ ಈ ಪರ್ವತ ಪ್ರದೇಶ ನೀಡುವ ಸುತ್ತಮುತ್ತಲಿನ ಪ್ರದೇಶಗಳ ಅದ್ಭುತವಾದ ವೀಕ್ಷಣೆಗಳಿಂದಾಗಿ ಇನ್ನಷ್ಟು ಆಕರ್ಷಣೆಯೆನಿಸಿದೆ.