ಸೇಲಂ ಸಿಟಿ ಯು ನಾಲ್ಕು ಮುಖ್ಯ ಮಸೀದಿಗಳನ್ನು ಒಳಗೊಂಡಿದೆ. ಈ ಧಾರ್ಮಿಕ ಸ್ಥಳಗಳು ಈ ಪ್ರದೇಶದ ಎಲ್ಲ ಧರ್ಮದವರು ಸೇರುವ ಸ್ಥಳವಾಗಿದೆ. ಜಮ್ಮ ಮಸೀದಿಯು ಈ ನಗರದ ಮೊದಲ ಮಸೀದಿ. ಈ ಮಸೀದಿಯು ತಿರುಮನಿಮತು ನದಿಯ ದಕ್ಷಿಣ ಬಾಗ ಮತ್ತು ನಗರದ ಮಧ್ಯ ಭಾಗದಲ್ಲಿ ಬರುತ್ತದೆ. ಇದನ್ನು ಮೈಸೂರು ಟಿಪ್ಪು ಸುಲ್ತಾನ ಕಟ್ಟಿಸಿದ ಮತ್ತು ತನ್ನ ಪ್ರಾರ್ಥನೆಯನ್ನು ಇಲ್ಲಿ ನಡೆಸುತ್ತಿದ್ದ ನಂತರ ಇದನ್ನು ಬ್ರಿಟಿಷರಿಗೆ ನೀಡಲಾಯಿತು. ಇಲ್ಲಿನ ಕೋಟೆಗೆ ಹತ್ತಿರದಲ್ಲಿ ಮೇಲ್ತೆರು ಮತ್ತು ಕೆಲ್ತೆರು ಎಂಬ ಮಸೀದಿಗಳಿವೆ. ಹಳೆ ಮಾರ್ಕೆಟ್ ನ ಹತ್ತಿರದ ಮಹಮದ್ ಪುರ ದಲ್ಲಿರುವ ಆಲ್ ಅಮಿನ್ ಮಸೀದಿಯು ನಾಲ್ಕನೇ ಮಸೀದಿಯಾಗಿದೆ.