Search
  • Follow NativePlanet
Share
ಮುಖಪುಟ » ಸ್ಥಳಗಳು » ಸಕಲೇಶಪುರ » ಹವಾಮಾನ

ಸಕಲೇಶಪುರ ಹವಾಮಾನ

ಸಕಲೇಶಪುರಕ್ಕೆ ಕೊಡಲು ಮಳೆಗಾಲವನ್ನು ಹೊರತುಪಡಿಸಿ ವರ್ಷದ ಎಲ್ಲಾ ಕಾಲವು ಉತ್ತಮವಾಗಿದೆ. ಮಳೆಗಾಲದಲ್ಲಿ ಭಾರಿ ಮಳೆಯಿಂದ ಇಲ್ಲಿನ ಬೆಟ್ಟ-ಗುಡ್ಡಗಳು ಮತ್ತು ಸುತ್ತಲಿನ ನೆಲ ಎಲ್ಲವು ಸ್ವಲ್ಪ ಜಾರುವುದರಿಂದ ಚಾರಣ ಮತ್ತು ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಸುರಕ್ಷಿತವಲ್ಲ.

ಬೇಸಿಗೆಗಾಲ

(ಏಪ್ರಿಲ್ ನಿಂದ ಮೇ): ಸಕಲೇಶಪುರದಲ್ಲಿ ಬೇಸಿಗೆಯ ದಿನಗಳು ಹಗಲಿನಲ್ಲಿ 40° ಸೆಲ್ಶಿಯನ್ ಇದ್ದರೆ, ರಾತ್ರಿ ವೇಳೆಯಲ್ಲಿ ಇದು 22° ಸೆಲ್ಶಿಯಸ್ ವರೆಗೆ ಕುಸಿಯುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಸಕಲೇಶಪುರದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಪರಿಣಾಮದಿಂದಾಗಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಈ ಕಾಲದಲ್ಲಿ ಚಾರಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳುವುದು ಅಸಾಧ್ಯ ಹಾಗಾಗಿ  ಪ್ರವಾಸಿಗರು ಈ ಸಮಯದಲ್ಲಿ ಸಕಲೇಶಪುರಕ್ಕೆ ಭೇಟಿಕೊಡದಿರುವುದು ಉತ್ತಮ.

ಚಳಿಗಾಲ

(ನವೆಂಬರ್ ನಿಂದ ಡಿಸೆಂಬರ್): ಚಳಿಗಾಲದಲ್ಲಿ ಸಕಲೇಶಪುರವು ತನ್ನ ತಂಪಾದ ಮತ್ತು ಹಿತವಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಚಳಿಗಾಲದಲ್ಲಿ ಸಕಲೇಶಪುರದ ಉಷ್ಣಾಂಶ 10° ಸೆಲ್ಶಿಯಸ್ ನಿಂದ 32° ಸೆಲ್ಶಿಯಸ್ ವರೆಗೆ ಇರುತ್ತದೆ. ಈ ಹಿತವಾದ ಮತ್ತು ಆಹ್ಲಾದಕರವಾದ ವಾತಾವರಣದಿಂದಾಗಿ ಸಕಲೇಶಪುರಕ್ಕೆ ಭೇಟಿಕೊಡಲು ಚಳಿಗಾಲ ಸಕಾಲವಾಗಿದೆ.