Search
  • Follow NativePlanet
Share

ಸೈಹಾ : ಮಿಜ಼ೋರಾಂ ನ ದಕ್ಷಿಣದ ತುತ್ತತುದಿ

12

ಮಿಜ಼ೋರಾಂ ನ ದಕ್ಷಿಣದ ತುತ್ತತುದಿಯಲ್ಲಿರುವ ಸೈಹಾ ಜಿಲ್ಲೆ ಮಿಜ಼ೋರಾಂ ನ ಎಂಟು ಜಿಲ್ಲೆಗಳಲ್ಲೊಂದು. ಜಿಲ್ಲಾ ಮುಖ್ಯ ಕೇಂದ್ರವೂ ಸೈಹಾ ವೇ ಆಗಿದೆ. ಮಾರಾ ಸ್ವಾಯುತ್ತ ಜಿಲ್ಲಾ ಪರಿಷತ್ತಿಗೂ ಇದೆ ಜಿಲ್ಲಾ ಕೇಂದ್ರವಾಗಿದೆ. ಮಾರಾ ಸ್ವಾಯುತ್ತ ಜಿಲ್ಲಾ ಪರಿಷತ್ತು ನಂತಹ ಮೂರು ಪರಿಷತ್ತುಗಳು ಮಿಜ಼ೋರಾಂ ನಲ್ಲಿವೆ. ಸೈಹಾ ಜಿಲ್ಲೆಯ ಉತ್ತರ ಮತ್ತು ವಾಯುವ್ಯ ಭಾಗಕ್ಕೆ ಲುಂಗ್ಲೈ ಇದೆ, ಪಶ್ಚಿಮಕ್ಕೆ ಲಾಗ್ತ್ಲೈ ಮತ್ತು ದಕ್ಷಿಣ ಮತ್ತು ಪುರ್ವಕ್ಕೆ ಮಯಾನ್ಮಾರ್ ನ ಭಾಗಗಳಿವೆ.

ಸೈಹಾ- ಜಿಲ್ಲಾ ಕೇಂದ್ರ ಸ್ಥಳ

ಐಜ಼ಾಲ್ ಮತ್ತು ಲುಂಗ್ಲೈ ನಂತರ ಸೈಹಾ ಮಿಜ಼ೋರಾಂ ನ ಮೂರನೆಯ ಅತೀ ದೊಡ್ಡ ನಗರವಾಗಿದೆ. ಇಲ್ಲಿನ ಸ್ಥಳೀಯ ಮಾರಾ ಭಾಷೆಯ ಸಿಯಾಹಾ ದಿಂದ ಸೈಹಾ ಶಬ್ದ ವ್ಯುತ್ಪತ್ತಿಯಾಗಿದೆ. ಇದನ್ನು ಎರಡು ಭಾಗಗಳಾಗಿಸಿದಾಗ ಸೈ ಎಂದರೆ ಆನೆ ಮತ್ತು ಹಾ ಎಂದರೆ ಹಲ್ಲು. ಹೀಗೆ ಸೈಹಾ ಎಂದರೆ ಆನೆಯ ದಂತ ಎಂದರ್ಥ. ಈ ಭಾಗದಲ್ಲಿ ದೊಡ್ಡ ಸಂಖ್ಯೆಯ ಆನೆಯ ದಂತಗಳು ಕಂಡು ಬಂದ ಕಾರಣದಿಂದ ಈ ಹೆಸರು ಬಂದಿದೆ. ಇಲ್ಲಿ ಮಾರಾ ಬುಡಕಟ್ಟು ಜನಾಂಗ ಮತ್ತು ಮಯನ್ಮಾರ್ ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಪಾಲಾ ಟಿಪೋ ಸರೋವರ, ಸೈಕೋ ಮತ್ತು ಮೌಂಟ್ ಮಾವ್ಮಾ ಸೈಹಾ ಪ್ರವಾಸೋದ್ಯಮದ ಮುಖ್ಯ ಅಂಶಗಳಾಗಿವೆ.

ಸೈಹಾ ವನ್ನು ತಲುಪುವುದು ಹೇಗೆ

ಮಿಜ಼ೋರಾಂ ನ ರಾಜಧಾನಿ ಐಜ಼ಾಲ್ ನಿಂದ ಸುಮಾರು 305 ಕಿ.ಮೀ ದೂರದಲ್ಲಿ ಸೈಹಾ ನಗರವಿದೆ. ಇಲ್ಲಿನ ಜಿಲ್ಲಾ ನಗರ ಕೇಂದ್ರಕೆ ರಾಷ್ಟೀಯ ಹೆದ್ದಾರಿ 54 ಜೀವನಾಡಿಯಾಗಿ ಕೆಲಸ ಮಾಡುತ್ತದೆ. ಪ್ರವಾಸಿಗಳು ಐಜ಼ಾಲ್ ಗೆ ರಸ್ತೆ ಮಾರ್ಗವಾಗಿ ತಲುಪಬಹುದು. ರಾಜ್ಯ ಸಾರಿಗೆ ಸಂಸ್ಥೆಯ ಹಲವು ಬಸ್ಸುಗಳು ಇಲ್ಲಿಗೆ ಸಂಪರ್ಕ ಕಲ್ಪಿಸುತ್ತವೆ.  ಸೈಹಾ ವಾಯುಗುಣ

ಸೈಹಾ ದಲ್ಲಿ ಸಮಶೀತೋಷ್ಣ ವಾಯುಗುಣ ಇದ್ದು ವರ್ಷಪೂರ್ತಿ ಆಹ್ಲಾದಕರವಾದ ವಾತಾವರಣ ಇರುತ್ತದೆ. ಬೇಸಿಗೆಗಳು ಸಾಮಾನ್ಯವಾಗಿದ್ದು ಮಳೆಗಾಲ ಬಹಳ ಜೋರಾಗಿರುತ್ತದೆ. ಚಳಿಗಾಲದಲ್ಲಿ ಸೈಹಾದಲ್ಲಿ ಚಳಿ ಇದ್ದರೂ ತಡೆಯಲಾಗದಂತಹ ಭಾರೀ ಚಳಿ ಅಂತು ಇರುವುದಿಲ್ಲ.

ಸೈಹಾ ಪ್ರಸಿದ್ಧವಾಗಿದೆ

ಸೈಹಾ ಹವಾಮಾನ

ಉತ್ತಮ ಸಮಯ ಸೈಹಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೈಹಾ

  • ರಸ್ತೆಯ ಮೂಲಕ
    ಐಜ಼ಾಲ್ ನಿಂದ ಸೈಹಾವನ್ನು ತಲುಪಲು ಇರುವ ಸಮೀಪದ ಮಾರ್ಗವೆಂದರೆ ಸಿಲ್ಚರ್. ಈ ಮಾರ್ಗವಾಗಿ ಮುಂದೆ ಲುಂಗ್ಲೈ, ಥೆಂಜ಼ಾಲ್ ಗೆ ತೆರಳಿ ಮುಂದೆ ರಸ್ತೆಯ ಮೂಲಕ ಪ್ರಯಾಣ ಬೆಳೆಸುವುದು. ರಾಷ್ಟೀಯ ಹೆದ್ದಾರಿ 54B ಯನ್ನು ಸೈಹಾ ತಲುಪಲು ಬಳಸಬಹುದಾಗಿದ್ದು ಈ ದಾರಿ ಸುಮಾರು ಐದುವರೆ ಘಂಟೆಗಳದ್ದಾಗಿದೆ. ಈ ದಾರಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿದ್ದು ಖಾಸಗಿ ಬಸ್ ಸೌಕರ್ಯವೂ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಕ್ಷಿಣ ಅಸ್ಸಾಂ ನ ಸಿಲ್ಚರ್, ಸೈಹಾಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ಸೈಹಾ ದಿಂದ ಸುಮಾರು 479 ಕಿ.ಮೀ ದೂರದಲ್ಲಿದೆ. ಸಿಲ್ಚರ್ ನಿಂದ ಲುಮ್ಡಿಂಗ್ ಗೆ ನ್ಯಾರೋ ಗೇಜ್ ಹಳಿ ಇದ್ದು ಇಲ್ಲಿಂದ ಮುಂದೆ ಗುವಾಹಟಿ ಗೆ ತಲುಪಬಹುದಾಗಿದೆ. ಸೈಹಾದಲ್ಲಿ ರೈಲ್ವೆ ಅಷ್ಟೊಂದು ಅನುಕೂಲಕರ ಸಾರಿಗೆ ಮಾಧ್ಯಮವಾಗಿಲ್ಲ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸೈಹಾ ಕ್ಕೆ ಸಮೀಪವಾಗಿರುವ ವಿಮಾನ ನಿಲ್ದಾಣ ಎಂದರೆ ಐಜ಼ಾಲ್ ಆಗಿದ್ದು ಇದು ಸುಮಾರು 305 ಕಿ.ಮೀ ದೂರದಲ್ಲಿದೆ. ಲೆಂಗ್ಪುಯಿ ವಿಮಾನ ನಿಲ್ದಾಣ ಈ ರಾಜ್ಯದ ಏಕಮಾತ್ರ ವಿಮಾನ ನಿಲ್ದಾಣವಾಗಿದ್ದು ಇಲ್ಲಿಂದ ಕೋಲ್ಕತ್ತಾ ಮತ್ತು ಗುವಾಹಟಿ ಗಳಿಗೆ ವಿಮಾನಗಳಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City