Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ರಾಣಿ ಸತಿ ದೇವಾಲಯ

ರಾಣಿ ಸತಿ ದೇವಾಲಯ, ರೌರ್ಕೆಲಾ

1

ರಾಣಿ ಸತಿ ದೇವಾಲಯವು ಬರ್ಮಿತ್‍ಪುರ್ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇದು ರೌರ್ಕೆಲಾದಿಂದ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಭಾರತದ ಎರಡನೆ  ಜುನ್-ಜುನ್ ಧಾಮ್ ಎಂದು ಖ್ಯಾತಿ ಪಡೆದಿದೆ. ಎರಡು ಎಕರೆಯಷ್ಟು ವಿಶಾಲವಾಗಿರುವ ಈ ದೇವಾಲಯವನ್ನು 1967ರಲ್ಲಿ ನಿರ್ಮಾಣ ಮಾಡಲಾಯಿತು. ಈ ದೇವಾಲಯದ ಸೌಂದರ್ಯವು ಸರಳವಾಗಿದ್ದರು ಮಂತ್ರ ಮುಗ್ದಗೊಳಿಸುವಂತಿದೆ. ಈ ದೇವಾಲಯವನ್ನು ಬಿಳಿಯ ಅಮೃತಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಅದ್ಭುತವಾದ ಕೆತ್ತನೆಗಳು ಈ ದೇವಾಲಯದ ಒಳಾಂಗಣವನ್ನು ಸಿಂಗರಿಸಿವೆ. ದೇವಾಲಯದ ರಾಜಗೋಪುರದ ಮೇಲೆ ಚಿನ್ನದ ಕಳಶವನ್ನು ಪ್ರತಿಷ್ಟಾಪಿಸಲಾಗಿದೆ. ಇದು ಇಡೀ ದೇವಾಲಯಕ್ಕೆ ಒಂದು ಬಗೆಯ ಭವ್ಯತೆಯನ್ನು ಒದಗಿಸಿದೆ.

ಪ್ರತಿನಿತ್ಯದ ಪೂಜೆ ಪುನಸ್ಕಾರಗಳ ಜೊತೆಗೆ ಇಲ್ಲಿ ಅಮಾವಾಸ್ಯೆಗಳ ದಿನದಂದು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಈ ದೇವಾಲಯದ ಆವರಣದ ಒಳಗೆ ಎರಡು ಅದ್ಭುತವಾದ ಉದ್ಯಾನವನಗಳು ಇವೆ. ಒಂದು ಉದ್ಯಾನವನದಲ್ಲಿ ಶಿವನ ದೇವಾಲಯವಿದೆ. ಈ ದೇವಾಲಯವು ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu