Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಮಂದಿರ ಜಲಾಶಯ

ಮಂದಿರ ಜಲಾಶಯ, ರೌರ್ಕೆಲಾ

1

ಮಂದಿರ ಜಲಾಶಯವು ರೌರ್ಕೆಲಾದ ಅತ್ಯಂತ ಪ್ರಸಿದ್ಧ ಆಕರ್ಷಣೆಗಳಲಿ ಒಂದಾಗಿದೆ. ಈ ಜಲಾಶಯವನ್ನು 1957 ರಿಂದ 1959ರ ನಡುವಿನ ಅವಧಿಯಲ್ಲಿ ಹಿರಾಕುಡ್ ಯೋಜನಾ ಪ್ರಾಧಿಕಾರದವರು ನಿರ್ಮಿಸಿದರು. ಈ ಜಲಾಶಯದ ಸ್ಥಳವು ಅತ್ಯಂತ ಸುಂದರವಾದ ಪ್ರದೇಶದಲ್ಲಿದೆ. ಶಂಖ ನದಿಯು ಒಂದು ಪ್ರಪಾತಕ್ಕೆ ಪ್ರವೇಶಿಸುವ ಸ್ಥಳದಲ್ಲಿ ಈ ಜಲಾಶಯವು ನೆಲೆಗೊಂಡಿದೆ. ಬೆಟ್ಟಗಳಿಂದ ಆವೃತವಾಗಿರುವ ಈ ಸ್ಥಳವು ಜಲಾಶಯಕ್ಕೆ ಒಂದು ಭವ್ಯತೆಯನ್ನು ಒದಗಿಸಿದೆ. ಈ ಜಲಾಶಯವನ್ನು ರೌರ್ಕೆಲಾ ಉಕ್ಕು ಘಟಕಕ್ಕೆ ನೀರನ್ನು ಒದಗಿಸುವ ಸಲುವಾಗಿ ನಿರ್ಮಾಣ ಮಾಡಲಾಯಿತು.

ಉಕ್ಕು ಘಟಕದಿಂದ ಕೆಲವೇ ಕೆಲವು ಕಿ.ಮೀ ದೂರದಲ್ಲಿರುವ ಈ ಜಲಾಶಯವನ್ನು ಉಕ್ಕು ಘಟಕಕ್ಕೆ ನೀರನ್ನು ಸಂಗ್ರಹಿಸಲು ಮತ್ತು ಪೂರೈಸುವ ಸಲುವಾಗಿ ನಿರ್ಮಾಣ ಮಾಡಲಾಯಿತು. ಮಂದಿರಾ ಜಲಾಶಯವು ರೌರ್ಕೆಲಾ ನಗರದಿಂದ 32 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿನ ಒಂದು ದೊಡ್ಡ ಜಲಾಗಾರದಲ್ಲಿ ಮೀನು ಸಾಕಾಣಿಕೆಯನ್ನು ಮಾಡಲಾಗುತ್ತದೆ. ಈ ಜಲಾಗಾರದಲ್ಲಿ ಪ್ರವಾಸಿಗರು ದೋಣಿ ಯಾನವನ್ನು ಮಾಡಬಹುದು. ಈ ಸ್ಥಳವು ಸಹ ವಿಹಾರ ತಾಣವಾಗಿ ಖ್ಯಾತಿಗೊಂಡಿದೆ. ಪ್ರವಾಸಿಗರು ಸಹ ಇಲ್ಲಿ ಮೀನುಗಾರಿಕೆಯನ್ನು ಮಾಡುತ್ತ ಮನೋರಂಜನೆಯನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri