ಡರ್ಜಿನ್ ರೌರ್ಕೆಲಾ ದ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ಥಳವು ಬ್ರಾಹ್ಮಣಿ ನದಿಯ ಸುಂದರವಾದ ತೀರ ಪ್ರದೇಶದಲ್ಲಿ ನೆಲೆಗೊಂಡಿದೆ. ನದಿಯ ಈ ಭಾಗದಲ್ಲಿ ತೀರವು ಹೊಂಬಣ್ಣದ ಮರಳಿನಿಂದ ಕೂಡಿದ್ದು, ಅತ್ಯಂತ ಆಕರ್ಷಣೀಯವಾಗಿದೆ. ಈ ಸ್ಥಳವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ವಲಯದಲ್ಲಿ ವಿಹಾರ ತಾಣವಾಗಿ ಜನಪ್ರಿಯಗೊಂಡಿದೆ. ಡರ್ಜಿನ್ನ ಸೌಂದರ್ಯವು ಇಲ್ಲಿನ ಪರಿಸರದ ಸೌಂದರ್ಯದಲ್ಲಿ ಅಡಗಿದೆ. ಇಡೀ ಸ್ಥಳವು ಹಚ್ಚ ಹಸಿರಿನ ಹೊದಿಕೆಯಡಿಯಲ್ಲಿ ನೆಲೆಗೊಂಡಿದೆ.
ಈ ಸ್ಥಳವು ತನ್ನ ಮಾದಕ ಸೌಂದರ್ಯದಿಂದಾಗಿ ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಸವಿಯಲು ಮತ್ತು ಕುಟುಂಬ ಸದಸ್ಯರ ಜತೆ ಕಾಲ ಕಳೆಯುತ್ತ, ವಿಶ್ರಾಂತಿ ಪಡೆಯಲು ಆಗಮಿಸುತ್ತಿರುತ್ತಾರೆ. ಡರ್ಜಿನ್ನಲ್ಲಿ ಒಂದು ಅದ್ಭುತವಾದ ಪ್ರವಾಸಿ ಬಂಗಲೆಯಿದೆ. ಇದರಲ್ಲಿ ಒಂದು ಅದ್ಭುತವಾದ ಉದ್ಯಾನವನವಿದ್ದು, ಅದು ನದಿಗೆ ಅಭಿಮುಖವಾಗಿ ನೆಲೆಗೊಂಡಿದೆ. ಡರ್ಜಿನ್ಗೆ ಆಗಮಿಸುವವರು ಈ ಪ್ರವಾಸಿ ಬಂಗಲೆಗೆ ಒಮ್ಮೆ ಭೇಟಿ ನೀಡುವುದು ಉತ್ತಮ.