ರೋಯಿಂಗ್ ನಿಂದ 3 ಕೀಲೊ ಮೀಟರ ದೂರದಲ್ಲಿ ಈ ಸುಂದರವಾದ ಸ್ಯಾಲಿ ಸರೋವರ ಇದೆ. ಇದು ಪ್ರಸಿದ್ಧ ಪ್ರವಾಸಿ ತಾಣ ಮತ್ತು ಜನಪ್ರಿಯ ವಿಹಾರದ ಸ್ಥಳವಾಗಿದೆ. ಈ ನೈಸರ್ಗಿಕ ಸರೋವರವು ಹಸುರಿನಿಂದ ಸುತ್ತುವರೆದಿದೆ. ಇದು ನಿಸರ್ಗ ಪ್ರಿಯರಿಗೆ ಪ್ರಕೃತಿಯ ವರ್ಣರಂಜಿತ ಆಟದ ಒಂದು ನೋಟವನ್ನು ಒದಗಿಸುತ್ತದೆ. ಈ ಸರೋವರದಲ್ಲಿ ಅನೇಕ ಜಾತಿಯ ಮೀನುಗಳಿವೆ. ಇಲ್ಲಿಗೆ ಭೇಟಿ ನೀಡಿರುವ ಪ್ರವಾಸಿಗರಿಗೆ ಮತ್ತು ಭೇಟಿ ನೀಡುವವರಿಗೆ ಇಲ್ಲಿ ವಸತಿ ಗೃಹದ ಸೌಲಭ್ಯವಿದೆ.