Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ಮೆಹಾವ ವನ್ಯ ಜೀವಿ ಅಭಯಾರಣ್ಯ

ಮೆಹಾವ ವನ್ಯ ಜೀವಿ ಅಭಯಾರಣ್ಯ, ರೋಯಿಂಗ್

2

ಸಮೃದ್ಧ ಹಸಿರು ಮತ್ತು ಬೃಹತ ಪರ್ವತ ಶ್ರೇಣಿಗಳು ಮೆಹಾವ ವನ್ಯ ಜೀವಿ ಅಭಯಾರಣ್ಯವನ್ನು ತುಂಬಾ ಅಕರ್ಷಕವಾಗಿದ್ದು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇದು ವಿಜ್ಞಾನಿಗಳಿಗೆ, ಜೀವ ಶಾಸ್ತ್ರಜ್ಞರಿಗೆ ಮತ್ತು ಸಸ್ಯ ಶಾಸ್ತ್ರಜ್ಞರಿಗೆ ಒಂದು ಉತ್ತಮ ಉಪಯೋಗಕಾರಿಯಾದ ಸಂಶೋಧನ ಸ್ಥಳ ಎಂದು ಸಾಬೀತಾಗಿದೆ. ಈ ಅಭಯಾರಣ್ಯದಲ್ಲಿ ಶ್ರೀಮಂತ ಸಸ್ಯ ಮತ್ತು ಪ್ರಾಣಿ ಜೀವರಾಶಿಯ ಜೊತೆಗೆ ಸುಂದರವಾದ ಕಣಿವೆಗಳಿವೆ.

ಈ ಅಭಯಾರಣ್ಯದಲ್ಲಿ ಅರಣ್ಯದ ನಾಲ್ಕು ಪ್ರಮುಖ ಭಾಗಗಳಿವೆ. ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳು, ಉಪ ಉಷ್ಣವಲಯ ಮತ್ತು ಸಮಶೀತೋಷ್ಣ ಕಾಡುಗಳು, ಸಮಶೀತೋಷ್ಣ ಎಲೆಗಳುಳ್ಳ ಕಾಡುಗಳು, ಸಮಶೀತೋಷ್ಣ ಶಂಕುಮರದ ಕಾಡುಗಳು ಇವೇ ಆ ನಾಲ್ಕು ಪ್ರಮುಖ ಭಾಗಗಳು.

ಈ ಅರಣ್ಯವು ತುಂಬಾ ಆಸಕ್ತಿಕರವಾದ ಸಸ್ಯವರ್ಗದ ಸರಣಿಯನ್ನು ಹೊಂದಿದ್ದು, ಇದು ವಿವಿಧ ಜಾತಿಯ  ಪಕ್ಷಿಗಳ, ಪ್ರಾಣಿಗಳ ಮತ್ತು ಕೀಟಗಳ ಆಶ್ರಯ ತಾಣವಾಗಿದೆ. ಇದು ಮೆಹಾವ ವನ್ಯ ಜೀವಿ ಅಭಯಾರಣ್ಯವನ್ನು ಪ್ರವಾಸಿಗರ ಆಕರ್ಷಣೆಯ ಸ್ಥಳವನ್ನಾಗಿ ಮಾಡುತ್ತದೆ. ಈ ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಪ್ರಮುಖ ಜಾತಿಯ ಸಸ್ತನಿಗಳೆಂದರೆ ಹುಲಿ, ಚಿರತೆ, ಪಟ್ಟಿ ಚಿರತೆ, ನೀರು ಬೆಕ್ಕು, ಕಾಡು ಬೆಕ್ಕು, ಪುನುಗು ಬೆಕ್ಕು, ಕಾಡು ನಾಯಿ, ಹಳದಿ ಮುಂಗುಸಿ, ಮುಂಗುಸಿ, ಸಾಂಬಾರ, ಜಿಂಕೆ, ಭಾರತ ಆನೆ, ಆಸ್ಸಾಮಿ ಕೋತಿ, ಕಪಿ, ಹಿಮಾಲಯದ ಕರಡಿ, ಮುಳ್ಳು ಹಂದಿ,ಕೆಂಪು ಪಾಂಡಾ, ಕಸ್ತೂರಿ ಮೃಗ, ಹಿಮ ಚಿರತೆ , ಗೊರಿಲ್ಲ ಮತ್ತು ಇತ್ಯಾದಿ.

ಮೆಹಾವ ವನ್ಯ ಜೀವಿ ಅಭಯಾರಣ್ಯದಲ್ಲಿ ಕಾಣ ಸಿಗುವ ಪಕ್ಷಿಗಳೆಂದರೆ – ಗರಗಸು ಬಾತು, ದೊಡ್ಡ ನೀರು ಕಾಗೆ, ಕಾಟನ್ ಟೀಲ್, ಹಿಮಲಯ ಕಿಂಗ ಫಿಷರ್, ನೀಲಿ ಕುತ್ತಿಗೆಯ ಬಾರ್ಬೆಟ್,ಜಪಾನಿ ಆವ್ಫಿಂಚ್, ಹೊನ್ನಕ್ಕಿ, ಕಾಜಾಣ, ಹಸಿರು ಪಾರಿವಾಳ, ಮಡಿವಾಳ , ಗೂಬೆ, ರತ್ನಪಕ್ಷಿ ಸಣ್ಣ ಬಾಲದ ರೆನಬಾಬ್ಲರ್ ಇತ್ಯಾದಿ.

ಈ ಅಭಯಾರಣ್ಯದಲ್ಲಿ ಕೆಲವು ವಿಷವಲ್ಲದ ಮತ್ತು ವಿಷಪೂರಿತ ಹಾವುಗಳಿವೆ. ಕಪ್ಪು ಕಟ್ಟು ಹಾವು, ನಜಾ ನಜ ಹವು,  ಕೀಗ ಕೋಬ್ರಾ, ಪೈಥಾನ,  ಭಾರತದ ಸಾಮಾನ್ಯ ಕಪ್ಪು ಹಾವು, ಹಿಮಾಲಯದ  ಹಾವು, ಹಸಿರು ಹಾವು ಇಲ್ಲಿರುವ ವಿವಿಧ ಜಾತಿಯ ಹಾವುಗಳಿಗೆ ಕೆಲ ಉದಾಹರಣಿಗಳು. ಇಲ್ಲಿ ಮೇಲೆ ಹೇಳಿರುವುದರ ಹೊರತಾಗಿಯೂ ಈ ಅಭಯಾರಣ್ಯದಲ್ಲಿ ಸಾಕಷ್ಟು ವಿವಿಧ ಜಾತಿಯ ಚಿಟ್ಟೆಗಳು ಮತ್ತು ಮೀನುಗಳು ಇವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun