ರೊಹ್ತಾಸ್ಗಡ್ ಕೋಟೆಯು ದೆಹ್ರಿಯ ದಕ್ಷಿಣ ಭಾಗದಲ್ಲಿದೆ ಇದು ಕೈಮುರ್ ಪ್ರದೇಶದಿಂದ 40 ಕಿಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿದೆ. ಈ ಪಟ್ಟಣವನ್ನು ಕಟ್ಟಿದ ರೊಹಿತಾಶ್ವನು ಪ್ರಸಿದ್ಧ ದೊರೆ ಹರಿಶ್ಚಂದ್ರನ ಮಗ. ರೊಹ್ತಾಸ್ಗಡ್ ಕೋಟೆ ಭಾರತದ ಪುರಾತನ ಕೋಟೆಗಳಲ್ಲೊಂದು. ಇದು ಸೋನೆ ಕಣಿವೆಯವರ ಧೈರ್ಯ, ಶೌರ್ಯ ಮತ್ತು ಶ್ರೇಷ್ಟತೆಯ ಪ್ರತೀಕವಾಗಿದೆ. ಇಲ್ಲಿ ಗಣೇಶನ ದೇವಾಲಯ, ಎಲಿಫೆಂಟ್ ಗೇಟ್, ಹತಿಯಾ ಪೊಲ್ ಎನ್ನುವ ತೂಗುಮನೆ, ಆಯ್ನಾ ಮಹಲ್, ಹಬ್ಶ ದೇವಾಲಯ ಮತ್ತು ದೇವಿ ದೇವಾಲಯ. ರೊಹ್ತಾಸ್ಗಡ್ ನಲ್ಲಿ ಜಲಪಾತಗಳು ಕೂಡ ಇವೆ. ಇವು ಇಲ್ಲಿನ ಕೈಮುರ್ ಬೆಟ್ಟದಿಂದ ಧುಮುಕುತ್ತವೆ. ಇಲ್ಲಿಂದ ಪೂರ್ವಕ್ಕೆ ಹರಿದು ಸೋನೆ ನದಿಯನ್ನು ಸೇರುತ್ತದೆ. ರೊಹ್ತಾಸ್ಗರ್ಗೆ ಭೇಟಿ ನೀಡಿದರೆ ಹಲವು ಅದ್ಭುತಗಳನ್ನು ನೋಡಬಹುದು.