ದೆಹ್ರಿ ಸೊನೆ ನದಿಯ ದಂಡೆಯಲ್ಲಿ 99 ಮೀಟರ್ಗಳಷ್ಟಿದೆ. ಐತಿಹಾಸಿಕವಾಗಿ ದೆಹ್ರಿಯು ಬ್ರಿಟೀಷರ ಕಾಲದಲ್ಲಿ ಸೈನಿಕರು ಕೊಲ್ಕತ್ತಾದಿಂದ ದೆಹಲಿಗೆ ಹೋಗುವಾಗ ಸೋನೆ ನದಿಯನ್ನು ದಾಟುವ ಹಾದಿಯಲ್ಲಿ ವಿಶ್ರಾಂತಿ ಪಡೆಯಲು ಕ್ಯಾಂಪ್ ಹಾಕುತ್ತಿದ್ದ ಸ್ಥಳವಾಗಿತ್ತು. ಈ ಕ್ಯಾಂಪನ್ನು ಪರಾಒ ಎಂದು ಕರೆಯಲಾಗುತ್ತಿತ್ತು. ದೆಹ್ರಿ ಎಂದರೆ ಕೆಳಗಿನ ಪಟ್ಟಣ ಎಂದರ್ಥ. ಇಲ್ಲಿನ ಮುಖ್ಯ ಸಂಗತಿಯೆಂದರೆ ಇಲ್ಲಿನ ಪ್ರಸಿದ್ಧ ಕಲ್ಲಿದ್ದಲ ಡಿಪೋ. ಇದು ಉತ್ತರ ಭಾಗದಿಂದ ಗ್ರಾಹಕರನ್ನು ಸೆಳೆಯುತ್ತದೆ. ಇಲ್ಲೇ ಬೆಂಗಾಲಿಯ ಪ್ರಸಿದ್ಧ ಶರತ್ಚಂದ್ರ ಚಟ್ಟೋಪಾಧ್ಯರು ತಮ್ಮ ಪ್ರೀತಿಪಾತ್ರ ಕೃತಿ ಗಿರಿಹದ್ದಾಹ ರಚಿಸಿದ್ದು. ಬ್ರಿಟಿಷರು ಪಾಶ್ಚಾತ್ಯ ಶಿಕ್ಷಣವನ್ನು ಪ್ರಚುರಪಡಿಸುವ ಸಲುವಾಗಿ ದೆಹ್ರಿ ಪಬ್ಲಿಕ್ ಶಾಲೆಯನ್ನು ಸ್ಥಾಪಿಸಿದರು.