ಹತ್ಕೇಶ್ವರಿ ಮಠ ದೇವಸ್ಥಾನ ಸಂಕೀರ್ಣವು ಹತ್ಕೋಟಿಯಲ್ಲಿನ ಪ್ರಮುಖ ಪ್ರವಾಸಿ ತಾಣ. ಈ ದೇವಸ್ಥಾನವು 6 ಮತ್ತು 9ನೇ ಶತಮಾನದ ಕಲಾತ್ಮಕ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ. ಇಲ್ಲಿ ಹಿತ್ತಾಳೆಯ ಮಹಿಷಾಸುರಮರ್ದಿನಿ ದೇವಿಯ ಮೂರ್ತಿಯಿದೆ. ಈಕೆ ದುರ್ಗಾದೇವಿಯ ಇನ್ನೊಂದು ಅವತಾರ ಎಂದು ಹೇಳಲಾಗಿದೆ. ಈ ಮೂರ್ತಿಗೆ ಎಂಟು ಕೈಗಳಿವೆ ಹಾಗೂ ಹುಲಿಯ ಮೇಲೆ ಕೂತಿರುವಂತೆ ಚಿತ್ರಿಸಲಾಗಿದೆ. ಮಹಿಷಾಸುರನನ್ನು ಮರ್ದಿಸಿದ ಸಂಕೇತವಾಗಿ ಒಂದು ಕೈಯಲ್ಲಿ ಈಕೆ ಖಡ್ಗವನ್ನು ಹಿಡಿದಿದ್ದಾಳೆ.
ಅಶ್ವಿನಿ ನವರಾತ್ರಿ ಮತ್ತು ಚೈತ್ರ ನವರಾತ್ರಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ದೂರದೂರುಗಳಿಂದ ಜನರು ಇಲ್ಲಿಗೆ ಬಂದು ಮಹಿಷಾಸುರ ಮರ್ದಿನಿಯನ್ನು ಪೂಜಿಸುತ್ತಾರೆ. ಕುರಿ ಅಥವಾ ಆಡುಗಳನ್ನು ಬಲಿ ಕೊಟ್ಟು ಮಹಿಷಾಸುರಮರ್ದಿನಿಯನ್ನು ಸಂತೃಪ್ತಗೊಳಿಸಲಾಗುತ್ತದೆ.
ಸಂಕೀರ್ಣದ ಪ್ರವೇಶದಲ್ಲೇ ಇನ್ನೊಂದು ಹಿಂದೂ ದೇವರ ಗುಡಿಯಿದೆ. ಒಂದು ಧರ್ಮಶಾಲೆ, ಒಂದು ವಿಶ್ರಾಂತಿ ಕೋಣೆ ಮತ್ತು ಉಗ್ರಾಣವು ಈ ಸಂಕೀರ್ಣದಲ್ಲಿದೆ.
ಈ ದೇವಸ್ಥಾನಗಳಿಗೆ ಮೂಲದಲ್ಲಿ ಶಿಖರದ ರೀತಿಯಲ್ಲಿ ಗೋಪುರವನ್ನು ನಿರ್ಮಿಸಲಾಗಿತ್ತು. ನಂತರದಲ್ಲಿ ಇದರ ಬದಲಾಗಿ ಪಗೋಡಾಗಳನ್ನು ನಿರ್ಮಿಸಲಾಯಿತು. ಸದ್ಯ ಪಗೋಡಾಗಳನ್ನೇ ನಾವು ನೋಡಬಹುದು.